ಶ್ರೀ ಅರಬಿಂದೋ ಸಮಿತಿಯ ವಾರ್ಷಿಕೋತ್ಸವ

218

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿಯ ಶ್ರೀ ಅರಬಿಂದೋ ಸಮಿತಿಯ ವಾರ್ಷಿಕೋತ್ಸವವನ್ನು ಫೆಬ್ರವರಿ 4ರಂದು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನಲ್ಲಿ ಆಚರಿಸಲಾಯಿತು. ಮಾತಾರವಿಂದರ ಫೋಟೋ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಾತೆಯರ ಕುರಿತು ಉಪನ್ಯಾಸ ನೀಡಿದ ಮಹಾನಂದ ಬಿರಾದಾರ, ಮಾತೆಯ ಮಕ್ಕಳು ಕೈ ಬಿಡಬಹುದು. ಆದರೆ, ಅಧ್ಯಾತ್ಮಕ ಸಾಧನೆಯಲ್ಲಿ ತೊಡಗಿರುವ ನಾವು ಎಂದಿಗೂ ಕೈ ಬಿಡುವುದಿಲ್ಲ ಎಂದರು. ಅಮೆರಿಕಾದ ಚಿಕ್ಯಾಗೋ ಧರ್ಮಸಭೆಗೆ ಸ್ವಾಮಿ ವಿವೇಕಾನಂದರು ಹೋದ ಸಂದರ್ಭದಲ್ಲಿಯೇ ಅರಬಿಂದೋರು ಪಾಶ್ಚಿಮಾತ್ಯ ಜ್ಞಾನವನ್ನು ಸಂಗ್ರಹಿಸಿ ಭಾರತದ ಮೂಲ ಬೇರಿಗೆ ಬಂದರು. ಇದರಿಂದ ಭಾರತದ ಒಳಗೂ, ಹೊರಗೂ ಅಧ್ಯಾತ್ಮ ಪಸರಿಸಿತು ಎಂದು ಎ.ಎಸ್ ಗಾಣಗೇರ ಹೇಳಿದರು.

ಸಾಲೋಟಗಿಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ಪುರಾತನ, ರಾಷ್ಟçಕೂಟರ ಮೂರನೇ ಕೃಷ್ಣನ ಕಾಲಕ್ಕೆ ಇದ್ದ ವಿಶ್ವವಿದ್ಯಾಲಯದ ಕುರಿತು ಡಿ.ಎನ್ ಅಕ್ಕಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಗೀತಯೋಗಿ, ಶ್ರೀ ಅರಬಿಂದೋ ಸಮಿತಿ ನಡೆದು ಬಂದ ಹಾದಿ, ಅವರು ನೀಡಿದ ಯೋಗಸೂತ್ರದ ಬಗ್ಗೆ ತಿಳಿಸಿದರು. ಸಮಿತಿಯ ಅಧ್ಯಕ್ಷರಾದ ದುಂಡಪ್ಪ ಹ್ಯಾಳದ ಅಧ್ಯಕ್ಷತೆ ವಹಿಸಿದ್ದರು.

ಸದಸ್ಯರಾದ ಸುಭಾಶ್ಚಂದ್ರ ಗದ್ಯಾಳ, ಅಶೋಕ ಚನಗೊಂಡ, ಸೋಮನಾಥ ಶಿವೂರ, ಮಲ್ಲಪ್ಪ ಮಂಗೇAಡ, ಗುರುಶಾಂತ ಪ್ರಧಾನಿ, ಶಿವಶಂಕರ ಇಂಗಳೆ, ಗಂಗಾಧರ ಸೋಮಜಾಳ, ಶಿವಯೋಗಪ್ಪ ದೊಡ್ಡಿ ಭಾಗವಹಿಸಿದ್ದರು. ವಿನೋದ ಗಾಣಗೇರ ಸ್ವಾಗತಿಸಿದರು. ಸತೀಶ ಬಾಲಿ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!