ಸಿಂದಗಿ ಪುರಸಭೆಯ ಅಸಲಿ ಚೆಕ್ ನಕಲಿ ಸಹಿ.. 50 ಲಕ್ಷ ರೂಪಾಯಿ ಹಗರಣ: ಎಸಿಗೆ ಮನವಿ

918

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪುರಸಭೆ ಕಚೇರಿ ಅನ್ನೋದು ಭ್ರಷ್ಟರ ಕೊಂಪೆಯಾಗಿದೆ. ಹತ್ತು ಇಪತ್ತು ರೂಪಾಯಿಗೂ ಕೈ ಚಾಚುವುದರಿಂದ ಹಿಡಿದು ಲಕ್ಷ ಲಕ್ಷ ತನಕ ಇಲ್ಲಿ ಅಂದರ್ ಬಾಹರ್ ನಡೆಯುತ್ತೆ. ಇಲ್ಲಿನ ಬಹುತೇಕ ಸಿಬ್ಬಂದಿ ಲೋಕಲ್. ಹೀಗಾಗಿ ಬರೋ ಹೋಗೋ ಮುಖ್ಯಾಧಿಕಾರಿಗಳನ್ನೂ ಯಾಮಾರಿಸಿ ಅಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಪುರಸಭೆಯ ಚೆಕ್ ಎಗರಿಸಿ ಈ ಹಿಂದಿನ ಮುಖ್ಯಾಧಿಕಾರಿ ಸೈಯದ ಅಹ್ಮದ ಅವರಂತೆ ನಕಲಿ ಸಹಿ ಮಾಡಿ ಯೂನಿಯನ್ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಲಾಗಿದೆ. ಹೀಗೆ ಡ್ರಾ ಮಾಡಲಾದ ಚೆಕ್ ನಂಬರ್ ಪುರಸಭೆಯ ರಿಜಿಸ್ಟರ್ ನಲ್ಲಿ ಎಂಟ್ರಿ ಸಹ ಆಗಿಲ್ಲಂದ್ರೆ ಊಹಿಸಿಕೊಳ್ಳಿ ಎಷ್ಟೊಂದು ಕಳ್ಳಾಟ ನಡೆಯುತ್ತಿದೆ ಅನ್ನೋದು.

ಇದು ಸಾಲದು ಎಂಬಂತೆ 2018-19ನೇ ಸಾಲಿನ ಎಫ್ಎಸ್ ಸಿ ವಿಶೇಷ ಅನುದಾನದಲ್ಲಿ ಪುರಸಭೆ ಕಟ್ಟಡ ಕಟ್ಟಲು 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಅದು ಕೆಲಸ ಮಾಡದೆ ಮುಂಗಡವಾಗಿ ಪಾಟೀಲ ಅನ್ನೋ ಗುತ್ತಿಗೆದಾರನಿಗೆ ನೀಡಲಾಗಿದೆ. ಇದುವರೆಗೂ ಕಟ್ಟಡವೂ ನಿರ್ಮಾಣವಾಗಿಲ್ಲ. ಹಣವೂ ವಾಪಸ್ ಬಂದಿಲ್ಲವೆಂದು ಪುರಸಭೆ ಸದಸ್ಯರು ಇಂಡಿ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಇಲ್ಲದೆ ಹೋದ್ರೆ ಸೆಪ್ಟೆಂಬರ್ 10ರಂದು ಪುರಸಭೆ ಮುಂದೆ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಪುರಸಭೆ ಸದಸ್ಯರಾದ ಶಾಂತವೀರ ಬಿರಾದಾರ, ಹಾಸೀಮ ಆಳಂದ, ಬಸವರಾಜ ಯರನಾಳ ಸೇರಿದಂತೆ ಹಲವರು ಇದ್ದರು.




Leave a Reply

Your email address will not be published. Required fields are marked *

error: Content is protected !!