ಸಿಂದಗಿ ತಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ

429

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಬಿಜೆಪಿಯ 12 ಸದಸ್ಯರಿಂದ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾದ ಪ್ರಭಾವತಿ ಸಿರಸಗಿ ಅವರೆ ಗೈರಾಗುವ ಮೂಲಕ ಅವಿಶ್ವಾಸ ಮಂಡನೆಯಾಗಿದೆ.

ಇದ್ರಿಂದಾಗಿ ಮುಂದಿನ ದಿನಗಳಲ್ಲಿ ಚುನಾವಣೆ ದಿನಾಂಕ ಘೋಷಿಸಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಸಿಂದಗಿ ತಾಲೂಕು ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಸದಸ್ಯರು ಗೆಲವು ಸಾಧಿಸಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಒಟ್ಟು 23 ಜನ ಸದಸ್ಯರಲ್ಲಿ 21 ಸದಸ್ಯರ ಭಾಗವಹಿಸಿದ್ರು. ಬಿಜೆಪಿಯ 12, ಕಾಂಗ್ರೆಸ್ 7, ಪಕ್ಷೇತರ 2 ಭಾಗವಹಿಸುವ ಮೂಲಕ ಅವಿಶ್ವಾಸ ಮಂಡನೆ ಆಗಿದೆ.

ಇನ್ನು ಇದೆ ವೇಳೆ ಇಂಡಿಯ ಉಪ ವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ತಹಶೀಲ್ದಾರ್ ಸಂಜೀವಕುಮಾರ ದಾಸರ, ತಾಲೂಕು ಪಂಚಾಯ್ತಿ ಇಒ ಸುನೀಲ ಮದ್ದಿನ ಸೇರಿದ್ದಂತೆ ಪಂಚಾಯ್ತಿ ಅಧಿಕಾರಿಗಳು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!