Search

ಶಾಕ್ ಆಗ್ಬೇಡಿ ಇದು ಸಿಂದಗಿ ತಾಲೂಕಾಸ್ಪತ್ರೆ

577

ಸಿಂದಗಿ: ಇದೇನಿದು ಫೋಟೋ ಇಷ್ಟೊಂದು ಕಪ್ಪಾಗಿದೆ ಅಂತಾ ಶಾಕ್ ಆಗ್ಬೇಡಿ. ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಕರೆಂಟ್ ಸಮಸ್ಯೆಯಿಂದ ಕಂಡು ಬಂದಿರುವ ದೃಶ್ಯವಿದು. ವಿದ್ಯುತ್ ಸಮಸ್ಯೆಯಿಂದ ಇಲ್ಲಿಗೆ ಬರುವ ರೋಗಿಗಳ ಪಾಡು ಆ ದೇವರಿಗೆ ಪ್ರೀತಿ.

ಹೆಸರಿಗೆ ಮಾತ್ರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಾಗಿದೆ. ಸಮಸ್ಯೆಗಳು ಅನ್ನೋದು ಇದರ ಮೈತುಂಬಾ ತುಂಬಿಕೊಂಡಿವೆ. ಬಡ ರೋಗಿಗಳು ಇಲ್ಲಿಗೆ ಬಂದು ಪಡಬಾರದ ಪಾಡು ಪಡಬೇಕು. ಸಣ್ಣಪುಟ್ಟ ಕಾಯಿಲೆಯಿಂದ ಅಪಘಾತ, ಹೆರಿಗೆ, ತುರ್ತು ಚಿಕಿತ್ಸೆ ಘಟಕದ ವ್ಯವಸ್ಥೆ ಸಹ ಮಾಡಲಾಗಿದೆ. ಆದ್ರೆ, ಕರೆಂಟ್ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿದ್ದು, ರೋಗಿಗಳಿಗೆ ಸರಿಯಾದ ರೀತಿಯಿಂದ ಸೂಕ್ತ ಚಿಕಿತ್ಸೆ ನೀಡಲು ಆಗ್ತಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇಲ್ಲಿನ ಸಮಸ್ಯೆಯನ್ನ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕಿದೆ. ಇಲ್ದೇ ಹೋದ್ರೆ, ಮುಂದಿನ ದಿನಗಳಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸುವ ಚಿಂತನೆ ನಡೆದಿದೆ ಅಂತಾ ಸ್ಥಳೀಯರೊಬ್ಬರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!