ಪತ್ನಿಗೆ ಕುಡಿಯೋದು ಕಲಿಸಿ ಎಂದ ವಿಚಿತ್ರ ಗಂಡ

379

ಇದೊಂದು ವಿಚಿತ್ರ ಪ್ರಕರಣ. ಇದುವರೆಗೂ ನೀವು ಈ ರೀತಿಯ ಕೌನ್ಸೆಲಿಂಗ್ ವಿಚಾರ ಓದಿಲ್ಲ ಅನಿಸುತ್ತೆ. ಯಾಕಂದ್ರೆ ದಾಂಪತ್ಯ ಕಲಹ, ಮಾನಸಿಕ ಒತ್ತಡ, ಏಕಾಂಗಿತನ, ಅತಿಯಾದ ಸಿಟ್ಟು, ಅನುಮಾನದ ಗುಣ ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಕೌನ್ಸೆಲಿಂಗ್ ಮಾಡಲಾಗುತ್ತೆ. ಆಪ್ತ ಸಮಾಲೋಚಕರ ಮೂಲಕ ಅವರಲ್ಲಿ ಶಕ್ತಿ ತುಂಬಿ, ಅವರ ವೀಕ್ ನೆಸ್ ಕಡಿಮೆ ಮಾಡುವುದಾಗಿದೆ.

ಬಟ್, ಇಲ್ಲೊಂದು ವಿಚಿತ್ರ ಪ್ರಕರಣವಿದೆ. ಪತಿ ಮಹಾಶಯನೊಬ್ಬ ತನ್ನ ಪತ್ನಿ ಮದ್ಯ ಕುಡಿಯುತ್ತಿಲ್ಲ ಅಂತಾ ಹೇಳಿ ಕೌನ್ಸೆಲಿಂಗ್ ಗೆ ಕರೆದುಕೊಂಡು ಬಂದಿದ್ದಾನೆ. ತನ್ನ ಪತ್ನಿ ಕುಡಿಯಲು ಕಲಿಯಬೇಕು. ಹೀಗಾಗಿ ನೀವು ಆಕೆಯೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅಂತ್ಹೇಳಿ ಬಂದಿದ್ದ ಅಂತಾ ಶೈಲ್ ಆವಸ್ತಿ ಅನ್ನೋ ಆಪ್ತ ಸಮಾಲೋಚಕಿ ಹೇಳಿದ್ದಾರೆ. ಇಂತಹದೊಂದು ವಿಚಿತ್ರ ಪ್ರಕರಣ ನಡೆದಿರೋದು ಮಧ್ಯಪ್ರದೇಶದ ಭೋಪಾಲ್ ನಲ್ಲಿ.

ಆ ವ್ಯಕ್ತಿಯ ಮಾತು ಕೇಳಿದ ಆಪ್ತ ಸಮಾಲೋಚಕಿ ಹಾಗೂ ಅಲ್ಲಿನ ಮಂದಿ ಸುಸ್ತಾಗಿದ್ದಾರೆ. ಇದ್ಯಾವುದು ಉಲ್ಟಾ ಕೇಸ್ ಅಂತಾ ಕನ್ ಫ್ಯೂಸ್ ಆಗಿದ್ದಾರೆ. ಕುಡಿಯೋದು ಬಿಡಿಸಿ ಅಂತಾ ಬರೋದು ಕೇಳಿದ್ದೇವೆ. ಕುಡಿಯೋದು ಕಲಿಸಿ ಅಂತಾ ಬಂದಿರೋ ಕೇಸ್ ಇದೇ ಮೊದ್ಲು ಅಂತಾ ಹೇಳಿದ್ದಾರೆ. ಭೋಪಾಲ್ ನ ಈ ದಂಪತಿಗೆ 9, 6 ಹಾಗೂ 4 ವರ್ಷದ ಮಕ್ಕಳಿದ್ದಾರೆ. ತುಂಬು ಕುಟುಂಬ. ಆದ್ರೆ, ಪತಿ ಹಾಗೂ ಆತನ ಮನೆಯವರಿಗೆ ಪತ್ನಿ ಕುಡಿಯುವುದಿಲ್ಲ ಅನ್ನೋ ಚಿಂತೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಈ ಕುಟುಂಬವೇನು ಶ್ರೀಮಂತವಲ್ಲ. ಸಾಮಾನ್ಯ ಮಧ್ಯಮವರ್ಗ. ಇವರ ಮನೆಯಲ್ಲಿರುವ ಎಲ್ಲರೂ ಸಭೆ ಸಮಾರಂಭಗಳಲ್ಲಿ ಕುಡಿಯುತ್ತಾರೆ. ಹೀಗಾಗಿ ಪತ್ನಿಯೂ ಕುಡಿಯಬೇಕು ಅನ್ನೋದು ಪತಿ ಬಯಕೆ. ಇದು ಆತನ ಮನೆಯವರ ಆಸೆ ಸಹ ಆಗಿದೆ. ಮದ್ಯ ಕುಡಿಯುವ ಕಾರಣಕ್ಕಾಗಿಯೇ ಪತಿ-ಪತ್ನಿ ಆಗಾಗ ಜಗಳ ಮಾಡಿಕೊಂಡಿದ್ದಾರೆ. ಒಮ್ಮೆ ಮಕ್ಕಳೊಂದಿಗೆ ಪತ್ನಿ ತವರು ಮನೆಗೆ ಸಹ ಹೋಗಿದ್ದಾಳೆ. ಹೀಗಿದ್ರೂ ಆಕೆಯ ಗಂಡ ಮಾತ್ರ ನೀನು ಕುಡಿಯೋದು ಕಲಿಬೇಕು ಅಂತಿದ್ದಾನೆ. ಹೀಗಾಗಿ ಆಪ್ತ ಸಮಾಲೋಚಕಿ ಬಳಿ ಕರೆದುಕೊಂಡು ಬಂದ ಗಂಡನಿಗೇ ಕೌನ್ಸೆಲಿಂಗ್ ಮಾಡುವ ಸ್ಥಿತಿ ಅವರದಾಗಿದೆ.




Leave a Reply

Your email address will not be published. Required fields are marked *

error: Content is protected !!