ವಾರ್ಷಿಕೋತ್ಸವದಲ್ಲಿ ಚಿಣ್ಣರ ನೃತ್ಯ ಕಲರವ

445

ಸಿಂದಗಿ: ಪಟ್ಟಣದ ಮಾಂಗಲ್ಯ ಭವನದಲ್ಲಿ ವಿದ್ಯಾಚೇತನ ಹಿರಿಯ ಪ್ರಾಥಮಿಕಶಾಲೆ ಮತ್ತು ಕ್ರಿಯೇಟಿವ್ ಕಿಡ್ಸ್ ಹೋಮ್‌ನ 11ನೇ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಮುಖ್ಯ ಅತಿಥಿಗಳಾದ ಎಸ್‌ ಬಿ ಪಿಯು ಕಾಲೇಜಿನ ಪ್ರಾಚಾರ್ಯ ಸುನೀಲ ಜಾಧವ ಮಾತ್ನಾಡಿ, ಶಾಲೆಗೆ ಬರುವ ಮಗುವಿನಲ್ಲಿ ಉತ್ತಮ ಸಂಸ್ಕಾರ ತುಂಬಿ ಉತ್ತಮ ನಾಗರಿಕನನ್ನಾಗಿ ಮಾಡಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಅಂತಾ ಹೇಳಿದ್ರು.

ಪಾಲಕರ ಪ್ರತಿನಿಧಿಗಳಾದ ಪ್ರೊ.ಶಾಂತು ದುರ್ಗಿ, ಗುರುರಾಜ ದೇಶಪಾಂಡೆ ಮಾತನಾಡಿದ್ರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಹ.ಮ.ಪೂಜಾರ ಮಾತ್ನಾಡಿ, ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣ ನೀಡುವ ಜೊತೆಗೆ ಅವರ ವ್ಯಕ್ತಿತ್ವ ರೂಪಿಸುವ ಚಟುವಟಿಕೆಗಳನ್ನ ಶಾಲೆ ಹಮ್ಮಿಕೊಳ್ತಿದೆ ಎಂದರು.

ಈ ವೇಳೆ ರೆಡ್ ಕ್ರಾಸ್ ತಾಲೂಕಾ ಶಾಖೆಯ ನೂತನ ಚೇರಮನ್ ಬಿ.ಎನ್.ಪಾಟೀಲ ಇಬ್ರಾಹಿಂಪೂರ, ಆಲಮೇಲ ತಾಲೂಕು ಕಸಾಪ ಅಧ್ಯಕ್ಷ ಡಾ.ರಮೇಶ ಕತ್ತಿ, ಸಿಂದಗಿ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಆಲಮೇಲ ತಾಲೂಕು ಮಸಾಪ ಅಧ್ಯಕ್ಷ ಪಂಡಿತ ಅವಜಿ, ಸಿಂದಗಿ ಮಸಾಪ ಅಧ್ಯಕ್ಷ ಅಶೋಕ ಬಿರಾದಾರ ಅವರನ್ನ ಸನ್ಮಾನಿಸಲಾಯ್ತು.

ಮುಖ್ಯಗುರುಮಾತೆ ಜ್ಯೋತಿ ರಮೇಶ ಪೂಜಾರ ಅವರು, ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಮೆಡಲ್ ನೀಡಿ ಗೌರವಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ರಮೇಶ ಪೂಜಾರ ಸ್ವಾಗತಿಸಿದರು. ಸೌಮ್ಯಾ ಬ್ಯಾಕೋಡ ನಿರೂಪಿಸಿದರು. ವಿಜಯಲಕ್ಷ್ಮಿ ಮಠಪತಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!