ಮೀನಾ ಬಜಾರ್ ಮೂವಿ ಲಿರಿಕಲ್ ಸಾಂಗ್ ರಿಲೀಸ್

469

ಚಂದನವನಕ್ಕೆ ಹೊಸಬರು ಎಂಟ್ರಿ ಆಗುತ್ತಲೇ ಇರುತ್ತಾರೆ. ಈ ಮೂಲಕ ತಮ್ಮ ಟ್ಯಾಲೆಂಟ್ ತೋರಿಸಲು ಮುಂದೆ ಬರ್ತಾರೆ. ಆ ಸಾಲಿಗೆ www.ಮೀನಾ ಬಜಾರ್.com ಸಿನ್ಮಾ ಸೇರಿಕೊಂಡಿದೆ. ರಾಣಾ ಸುನೀಲಕುಮಾರ ಸಿಂಗ್ ನಿರ್ದೇಶನ ಮಾಡಿರುವ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ.

ಲವ್, ಸೆಂಟಿಮೆಂಟ್ ಹಾಗೂ ಕ್ರೈಂ ಕಥಾಹಂದರವನ್ನ ಹೊಂದಿದ್ದು ಕಮರ್ಷಿಯಲ್ ಚಿತ್ರಕ್ಕೆ ಏನು ಬೇಕೋ ಅದೆಲ್ಲವೂ ಇದರಲ್ಲಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿರುವ ಮೂವಿ ಸೆನ್ಸಾರ್ ಕೆಲಸ ಸಹ ಮುಗಿದಿದೆ. ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧತೆ ನಡೆಸಿದೆ.

ವೈಭವಿ ಜೋಷಿ, ಆಲಿಶಾ, ಶ್ರೀಜಿತಾ ಘೋಷ ಹೀಗೆ ಮೂವರು ನಟಿಯರಿದ್ದಾರೆ. ಅರವಿಂದ ರಾವ ಹಾಗೂ ರಾಜೇಶ ನಟರಂಗ ಮೇನ್ ರೋಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಗ್ ಸಿನಿಮಾಸ್ ನಡಿಯಲ್ಲಿ ಬರ್ತಿರುವ ಮೂವಿಗೆ ನಾಗೇಂದ್ರ ಸಿಂಗ್ ಬಂಡಾವಳ ಹೂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!