ಮಕ್ಕಳ ಜ್ಞಾಪಕ ಶಕ್ತಿಗೆ ಯೋಗ ಸಹಕಾರಿ…

642
ಇಂದಿನ ಆಧುನಿಕ ಯುಗದಲ್ಲಿ  ಮಕ್ಕಳಲ್ಲಿ ಲಕ್ಷ್ಯ ಕೊಡುವುದು, ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದ್ದು, ಜಂಕ್ ಪುಡ್ ಗಳ ಬಯಕೆ ಹಾಗೂ ಬೊಜ್ಜು ಹೆಚ್ಚಾಗುತ್ತಿದೆ.  ಅದು ಅವರ ಮನಸ್ಸು ಮತ್ತು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅವರ ನಿಧಾನಗತಿಯ ದೈಹಿಕತೆ, ಸ್ಪರ್ಧಾ ಮನೋಭಾವಕ್ಕೆ ಕಾರಣವಾಗಿ ವಾತಾವರಣದ ಬಗ್ಗೆಯೇ ಅತೃಪ್ತಿ ಉಂಟುಮಾಡುವ ಅಪಾಯವಿರುತ್ತದೆ.
ಇಂತಹ ಮನೋಭಾವದಿಂದ ತಪ್ಪಿಸಲು ಮಾನಸಿಕ ಹಾಗೂ ದೈಹಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಲು ಯೋಗಾಭ್ಯಾಸ ಮುಖ್ಯವಾಗಿದೆ. ಎಂಟು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಮಕ್ಕಳು ಪ್ರತಿದಿನ ಒಂದು ಬಾರಿ ಸೂರ್ಯನಮಸ್ಕಾರ ಮಾಡಬೇಕು. ಮೊದಲಿಗೆ ನಿಧಾನವಾಗಿ ನಂತರ  ಮೂರರಿಂದ ಐದು ಬಾರಿ  ಮಾಡುವುದರಿಂದ ಮಾನಸಿಕ ಶಕ್ತಿ ವೃದ್ಧಿಸುತ್ತದೆ.ಮುಂದೆ 10 ರಿಂದ 15 ಬಾರಿ  ಮಾಡುವುದರಿಂದ ಹೃದಯದ ಸದೃಢತೆ ಹೆಚ್ಚಾಗುತ್ತದೆ.
ಯೋಗಾಭ್ಯಾಸದಿಂದ ಮಕ್ಕಳಿಗಾಗುವ ಪ್ರಯೋಜನಗಳು: 
ಜ್ಞಾಪಕ ಶಕ್ತಿ  ಹಾಗೂ ಲಕ್ಷ್ಯದ  ವೃದ್ಧಿ
ಮಕ್ಕಳಲ್ಲಿ ಆರೋಗ್ಯಕರ  ಆಹಾರ ಪದ್ಧತಿ ಬೆಳವಣಿಗೆ 
ಮನಸಿನ ಸಮತೋಲನವನ್ನು ಹೆಚ್ಚಿಸುತ್ತದೆ
ರೋಗ ನಿರೋಧಕ ಶಕ್ತಿ ವೃದ್ಧಿ

ಹೀಗಾಗಿ ಮಕ್ಕಳು ಯೋಗವನ್ನ ಸರಿಯಾದ ಪ್ರಮಾಣದಲ್ಲಿ ಮಾಡುವುದ್ರಿಂದ ಅವರ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುತ್ತಾರೆ.




Leave a Reply

Your email address will not be published. Required fields are marked *

error: Content is protected !!