ಥೈರಾಯ್ಡ್ ರೋಗದ ಲಕ್ಷಣಗಳೇನು?

741

ಇಂದಿನ ಅನಿಯಮಿತ ಜೀವನ ಶೈಲಿಯಿಂದಾಗಿ ಎಲ್ಲರಲ್ಲೂ ಸಾಮಾನ್ಯ.ವಾಗಿ ಥೈರಾಯ್ಡ್ ರೋಗ ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದ ಗ್ರಂಥಿಯಿರುತ್ತದೆ. ಇದ್ರಿಂದಾಗಿ ಹಾರ್ಮೋನ್ ಗಳ ವ್ಯತ್ಯಾಸವಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ.

ದೇಹದಲ್ಲಿರುವ ಅಂಗಾಂಗಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅದರಲ್ಲೂ ಥೈರಾಯ್ಡ್ ಗ್ರಂಥಿಗಳು ಹಾರ್ಮೊನನ್ನು ಬಿಡುಗಡೆ ಮಾಡುವುದರಿಂದ ಚಯಾಪಚಾಯ, ದೇಹದ ಉಷ್ಣತೆ ಮತ್ತು ನಾಡಿಬಡಿತ ಕ್ರಿಯೆಯು ನಿಯಂತ್ರಣದಲ್ಲಿರುತ್ತದೆ. ಈ ಮೂರರಲ್ಲಿ ಯಾವುದೇ ರೀತಿಯ ಏರುಪೇರು ಆದರೂ ಅದರಿಂದ ಯಕೃತ್, ಕರುಳು, ಕಿಡ್ನಿ ಮತ್ತು ಸಂತಾನೋತ್ಪತ್ತಿಯ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುವುದು.

ಮುಖ್ಯವಾಗಿ ಚರ್ಮ ಮತ್ತು ಕೂದಲಿನ ಮೇಲೆ ಥೈರಾಯ್ಡ್ ಹೆಚ್ಚು ಪರಿಣಾಮ ಬೀರುತ್ತದೆ. ಥೈರಾಯ್ಡ್ ಇರುವವರಿಗೆ ಅಂಗೈ ಬೆವರುತ್ತದೆ ಹಾಗೂ ಯಾವುದೇ ಗಾಯವಾದರೇ ಅದನ್ನು ಬೇಗ ಒಣಗಲು ಬಿಡುವುದಿಲ್ಲ. ಒಣ ಹಾಗೂ ತುರಿಕೆ ಉಂಟು ಮಾಡುವ ಚರ್ಮವು ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ. ಉಗುರು ಉದ್ದಗಿನ ಗೆರೆಯಂತೆ ಒಡೆದುಹೋಗಿದ್ದರೆ ಇದರ ಬಗ್ಗೆ ನೀವು ಚಿಂತಿಸಬೇಕು. ಇದು ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಕೂದಲು ಉದುರುವ ಸಮಸ್ಯೆ ಥೈರಾಯ್ಡ್ ರೋಗ, ಸ್ವರಕ್ಷಿತ ರೋಗ ದೇಹದ ಬೆಳವಣಿಗೆಗೆ ಅಗತ್ಯವಾದ ತ್ರಿಯಡೋಥೈರಾಯಿನ್ ಮತ್ತು ಥೈರಾಕ್ಸಿನ್ ಎಂಬ ಹಾರ್ಮೋನುಗಳು ಥೈರಾಯಿಡ್ ನಲ್ಲಿರುತ್ತವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಥೈರಾಯ್ಡ್ ರೋಗ ಇರುವವರಗ ಕತ್ತಿನ ಹಿಂಬಾಗದ ಚರ್ಮ ಬಣ್ಣದಲ್ಲಿ ಬದಲಾವಣೆಯಾಗುತ್ತದೆ. ಪಿಗ್ಮೆಂಟೇಶನ್ ಉಂಟಾಗುತ್ತದೆ. ಆರೋಗ್ಯಯುತ ಜೀವನಶೈಲಿಯಿಂದಾಗಿ ಥೈರಾಯ್ಡ್ ತಡೆಗಟ್ಟಬಹುದಾಗಿದೆ.


TAG


Leave a Reply

Your email address will not be published. Required fields are marked *

error: Content is protected !!