ಪಿಯುಸಿ ಫಲಿತಾಂಶ: ಅಂಜುಮಾನ್ ಕಾಲೇಜು ವಿದ್ಯಾರ್ಥಿನಿಯರ ಸಾಧನೆ

244

ಪ್ರಜಾಸ್ತ್ರ ಸುದ್ದಿ

ಸಿಂದಗಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಆಯಿಷಾ ಅತ್ತಾರ 553 (ಶೇ.92.16) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಶಾಹಿನ್ ಬಡಿಗೇರ್ 532(ಶೇ.88.66) ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಸನಾ ಮುಲ್ಲಾ 523 (ಶೇ.87.16) ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ಕುಳಿತ ಒಟ್ಟು 125 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ನಾಲ್ವರು, ಪ್ರಥಮ ದರ್ಜೆಯಲ್ಲಿ 42,  ದ್ವಿತೀಯ ದರ್ಜೆಯಲ್ಲಿ 33, 20 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿನ ಫಲಿತಾಂಶ ಶೇ.79.02 ಆಗಿದೆ. ಮೂಲಕ ಕಾಲೇಜಿನ ಕಿರ್ತಿ ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಎಸ್.ಎಮ್ ಪಾಟೀಲ್ (ಗಣಿಹಾರ) ಚೆರಮನ್ನರಾದ ಎ.ಎ ದುಧನಿ ಮತ್ತು ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು  ಮತ್ತು ಸಿಬ್ಬಂದಿ ವರ್ಗ ಶುಭ ಕೋರಿದೆ.




Leave a Reply

Your email address will not be published. Required fields are marked *

error: Content is protected !!