ಬೆಳ್ಳಂಬೆಳಗ್ಗೆ ಬಂಗಾಳ, ಕೇರಳದಲ್ಲಿ 9 ಉಗ್ರರ ಬಂಧನ

256

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇಂದು ಬೆಳಗ್ಗೆ ಎನ್ಐಎ ವಿಶೇಷ ಕಾರ್ಯಾಚರಣೆ ನಡೆಸಿ 9 ಅಲ್ ಖೈದಾ ಉ್ರಗರನ್ನ ಬಂಧಿಸಿದೆ. ದೇಶದ ಹಲವು ಕಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ, ಕೇರಳದ ಎರ್ನಾಕುಲಂನಲ್ಲಿ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ 11 ಕಡೆ ದಾಳಿ ನಡೆಸಿ 9 ಉಗ್ರರನ್ನ ಬಂಧಿಸಲಾಗಿದೆ.

ಬಂಧಿತ ಉಗ್ರರ ಬಳಿಯಿದ್ದ ಡಿಜಿಟಲ್ ಉಪಕರಣ, ಮಾರಕಾಸ್ತ್ರಗಳು, ಸ್ಫೋಟಕ ತಯಾರಿಕಾ ಪುಸ್ತಕಗಳು, ಜಿಹಾದಿ ಸಾಹಿತ್ಯ ಸೇರಿ ಅನೇಕ ವಸ್ತುಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಪಾಕ್ ಮೂಲದ ಅಲ್ ಖೈದಾ ಉಗ್ರ ಸಂಘಟನೆ, ಸೋಷಿಯಲ್ ಮೀಡಿಯಾ ಮೂಲಕ ಅವರನ್ನ ನೇಮಿಸಿದೆಯಂತೆ.

ಈ ಉಗ್ರರು ಹಣ ಸಂಗ್ರಹಿಸಿಕೊಂಡು ದೆಹಲಿಗೆ ಬಂದು ವಿವಿಧ ಕಡೆ ದಾಳಿಗೆ ಸಂಚು ರೂಪಿಸಿದ್ರಂತೆ. 9 ಜನ ಉಗ್ರರ ಬಂಧನದಿಂದಾಗಿ ದಾಳಿಯಾಗುವುದನ್ನ ತಪ್ಪಿಸಿದಂತಾಗಿದೆ.




Leave a Reply

Your email address will not be published. Required fields are marked *

error: Content is protected !!