ಡಾರ್ಲಿಂಗ್ ಸ್ವೀಟಿಯ ಮದುವೆ ಕಥೆ.. ಟಾಲಿವುಡ್ ಬ್ಯೂಟಿ ಹೇಳಿದ್ದೇನು?

418

ಸಿನಿ ದುನಿಯಾದಲ್ಲಿ ನಟ ನಟಿಯರ ನಡುವಿನ ಪ್ರೀತಿ, ಮದುವೆ, ಬ್ರೇಕಪ್, ಗಾಸಿಪ್ ಹೊಸದಲ್ಲ. ಕಲರ್ ಫುಲ್ ಜಗತ್ತಿನಲ್ಲಿ ಇದೆಲ್ಲವೂ ಕಾಮನ್. ಹೀಗಾಗಿ ಅನೇಕ ನಟ ನಟಿಯರ ಪ್ರೀತಿ, ಮದುವೆ ಕೆಲವೊಮ್ಮ ಲಾಂಗ್ ಟೈಂ ತೆಗೆದುಕೊಳ್ಳುತ್ತೆ. ಅದರಲ್ಲಿ ನಟ ಪ್ರಭಾಸ ಹಾಗೂ ನಟಿ ಅನುಷ್ಕಾ ಶೆಟ್ಟಿ ಜೋಡಿಯ ಕಥೆ.

ಟಾಲಿವುಡ್ ಅಂಗಳದಲ್ಲಿ ಡಾರ್ಲಿಂಗ್-ಸ್ವೀಟಿಯ ಲವ್ ಕಹಾನಿ ಇದೆ. ಅವರಿಬ್ಬರು ಮದ್ವೆ ಆಗ್ತಾರೆ ಅನ್ನೋದು ಬಹಳ ಹಿಂದಿನ ಮಾತು. ಈ ಬಗ್ಗೆ ಇವರಿಬ್ಬರು ಇದುವರೆಗೂ ಎಲ್ಲಿಯೂ ಏನೂ ಹೇಳಿಲ್ಲ. ಆದ್ರೆ, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ‘ಅರುಂಧತಿ’ ಎಲ್ಲವನ್ನೂ ಹೇಳಿದ್ದಾಳೆ.

ಕಳೆದ 15 ವರ್ಷಗಳಿಂದ ನಾನು ಪ್ರಭಾಸ್ ಒಳ್ಳೆಯ ಸ್ನೇಹಿತರು. ಮಧ್ಯರಾತ್ರಿ 3 ಗಂಟೆಗೆ ನಾನು ಫೋನ್ ಮಾಡಿದ್ರೂ ಮಾತ್ನಾಡ್ತಾರೆ. ಅಷ್ಟೊಂದು ಬೆಸ್ಟ್ ಫ್ರೆಂಡ್. ಹಾಗೇನಾದ್ರೂ ನಮ್ಮಿಬ್ಬರ ನಡುವೆ ಪ್ರೀತಿಯಿದ್ರೆ ಇಷ್ಟೊತ್ತಿಗೆ ಅದು ತಿಳಿಯುತಿತ್ತು. ಅಂತದ್ದೇನು ನಮ್ಮ ನಡುವೆ ಇಲ್ಲವೆಂದು ಹೇಳುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದಾಳೆ. ಆದ್ರೆ, ಪ್ರಭಾಸ-ಅನುಷ್ಕಾ ಫ್ಯಾನ್ಸ್ ಗೆ ಇದು ನಿರಾಸೆಯಾಗಿದೆ.




Leave a Reply

Your email address will not be published. Required fields are marked *

error: Content is protected !!