ತ್ರಿಷಾ ಟ್ವೀಟ್ ರಾಣಾಗೆ ತಳಕು ಹಾಕಿಕೊಂಡಿದ್ದೇಕೆ?

478

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ತ್ರಿಷಾ ಟ್ವೀಟ್ ವೊಂದನ್ನ ಮಾಡಿದ್ಳು. ಅದು ನಟ ರಾಣಾ ದಗ್ಗುಬಾಟಿಗೆ ತಳಕು ಹಾಕಿಕೊಂಡಿದೆ. ಕಾರಣ, ರಾಣಾ-ತ್ರಿಷಾ ಈ ಹಿಂದೆ ಲವ್ ಬರ್ಡ್ಸ್ ಆಗಿದ್ರು ಅನ್ನೋದು. ಇವರಿಬ್ಬರ ಡೇಟಿಂಗ್ ಬಗ್ಗೆ ಸಿನಿ ಮಂದಿ ಮಾತ್ನಾಡಿಕೊಳ್ತಿದ್ರು. ಆದ್ರೆ, ಈ ಜೋಡಿ ತುಟಿಬಿಚ್ಚಿರಲಿಲ್ಲ.

ಇದೀಗ ನಟ ರಾಣಾ, ಇಂಟೀರಿಯರ್ ಡಿಸೈನರ್ ಮಿಹೀಕಾ ಬಜಾಜ್ ಜೊತೆ ಎಂಗೇಜ್ ಆಗಿದ್ದು ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಆದ್ರೆ, ನಟಿ ತ್ರಿಷಾ ಮಾಜಿ ಪ್ರೇಯಸಿ ಈಗ್ಲೂ ಆಪ್ತ ಸ್ನೇಹಿತೆಯಾಗಿರಬೇಕು ಅನ್ನೋದು ಒಂದು ರೀತಿಯಲ್ಲಿ ಸೈಕೋ ಮನಃಸ್ಥಿತಿ ಇದ್ದಂತೆ ಎಂದು ಬರೆದಿದ್ಳು.

ಹೀಗೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದ ಬರಹ ಸಾಕಷ್ಟು ವೈರಲ್ ಆಗಿತ್ತು. ರಾಣಾ-ತ್ರಿಷಾ ನಡುವೆ ಲವ್ ಆಗಿತ್ತಾ? ಆಗಿದ್ರೆ ಯಾಕೆ ಬ್ರೇಕಪ್ ಆಯ್ತು ಅನ್ನೋದು ಗೊತ್ತಿಲ್ಲ. ಬಟ್, ತ್ರಿಷಾ ಪೋಸ್ಟ್ ವೈರಲ್ ಆಗ್ತಿದ್ದಂತೆ ಅದನ್ನ ಡಿಲೀಟ್ ಮಾಡಿದ್ದಾಳೆ. ಹೀಗೆ ಟ್ವೀಟ್ ಮಾಡಿ ರಾಣಾಗೆ ಟಾಂಟ್ ಕೊಟ್ಳಾ ಎಂದು ಮಾತ್ನಾಡಿಕೊಳ್ಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!