ಕೇರಳದ ಖ್ಯಾತ ಕವಿಯತ್ರಿಗೆ ಗೂಗಲ್ ಗೌರವ

274

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಕೇರಳದ ಖ್ಯಾತ ಕವಿಯತ್ರಿ ಬಾಲಮಣಿ ಅಮ್ಮ ಅವರ 113ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಗ್ರ್ಯಾಂಡ್ ಮದರ್ ಆಫ್ ಮಲಿಯಾಳಂ ಪೊಯಟ್ರಿ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ. ತ್ರಿಶೂರ್ ಜಿಲ್ಲೆಯ ಪುಣ್ಯಾಕುರ್ಲಂನಲ್ಲಿ 1909ರಲ್ಲಿ ಜನಿಸಿದರು.

1930ರಲ್ಲಿ ಕೊಪ್ಪುಕೈ ಅನ್ನೋ ಮೊದಲ ಕೃತಿ ಬಿಡುಗಡೆಯಾಯಿತು. ಆಗ ಅವರ ವಯಸ್ಸು 21 ವರ್ಷ. ಕವಿತೆ, ಅನುವಾದ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಸರಸ್ವತಿ ಸಮ್ಮಾನ್, ಭಾರತದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಸಂದಿವೆ. 2004ರಲ್ಲಿ ಕೊಚ್ಚಿಯಲ್ಲಿ ನಿಧನ ಹೊಂದಿದರು.




Leave a Reply

Your email address will not be published. Required fields are marked *

error: Content is protected !!