ಪ್ರಜಾಸ್ತ್ರ ಸುದ್ದಿ
ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ತನ್ನ ಬಳಕೆದಾರರಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಅದು ಬ್ಲೂ ಟಿಕ್ ಬೇಕು ಎನ್ನುವವರು ತಿಂಗಳಿಗೆ 8 ಡಾಲರ್ ಪಾವತಿಸಬೇಕು ಎಂದು, ಸಂಸ್ಥೆಯ ಮುಖ್ಯಸ್ಥ ಎಲನ್ ಮಸ್ಕ್ ಹೇಳಿದ್ದಾರೆ.
8 ಡಾಲರ್ ಎಂದರೆ 661 ರೂಪಾಯಿ ಆಗಲಿದೆ. ಮೊದಲು 20 ಡಾಲರ್ ಎಂದು ಹೇಳಲಾಗುತಿತ್ತು. ತಿಂಗಳಿಗೆ 8 ಡಾಲರ್ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ನೀಲಿ ಗುರುತು ಹೊಂದುವುದು ಬಹುತೇಕ ವಿವಿಐಪಿ, ವಿಐಪಿಗಳು. ನೀಲಿ ಗುರುತು ಇರುವ ಟ್ವಟ್ಟರ್ ಖಾತೆ ಮಾತ್ರ ಅವರ ಅಧಿಕೃತ ಖಾತೆಯಾಗಿರುತ್ತೆ.