ಎಸಿಬಿ ದಾಳಿ: ಬೈಯ್ಯಪ್ಪನಹಳ್ಳಿ ಠಾಣೆ ಪಿಎಸ್ಐ, ಪೇದೆ ಮುಖವಾಡ ಬಯಲು

292

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೈಯ್ಯಪ್ಪನಹಳ್ಳಿ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಣದ ಸಮೇತ ಎಸ್ಕೇಪ್ ಆಗಲು ಹೋದ ಹೆಡ್ ಕಾನ್ಸ್ ಟೇಬಲ್  ಕುಮಾರ ಎಂಬಾತ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.

ಮೊಬೈಲ್ ಕಳ್ಳತನ ಕೇಸ್ ನಲ್ಲಿ ಆರೋಪಿಗೆ ಇನ್ಸ್ ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್ಸ್ ಟೇಬಲ್ ಕುಮಾರ 2 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ರು. ಕಳ್ಳತನ ಆಗಿದ್ದ ಮೊಬೈಲ್ ಫೋನ್ ಗಳನ್ನ ರಿಸೀವ್ ಮಾಡಿದ್ದ ವ್ಯಕ್ತಿ, ಕೊನೆಗೆ 1 ಲಕ್ಷಕ್ಕೆ ಡೀಲ್ ಮಾತ್ನಾಡಿದ್ದ.

ಪಿಎಸ್ಐ ಸೌಮ್ಯ ಮೂಲತಃ ಚಿಕ್ಕಬಳ್ಳಾಪುರದವರು. 2017 ನೇ ಬ್ಯಾಚ್ ಅಧಿಕಾರಿಯಾದ ಸೌಮ್ಯ ಮೊದಲ ಪೋಸ್ಟಿಂಗ್ ಆಗಿದ್ದು ಸಹ ಬೈಯ್ಯಪ್ಪನಹಳ್ಳಿ ಠಾಣೆಗೆ. ಮಂಗಳವಾರ ಎಸಿಬಿ ಅಧಿಕಾರಿಗಳ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಹಣ ಪಡೆದ ಬಳಿಕ ಸಬ್ ಇನ್ಸ್ಪೆಕ್ಟರ್ ಸೌಮ್ಯ, ಹೆಡ್ ಕಾನ್ಸ್ ಟೇಬಲ್ ಕುಮಾರ ಎಂಬಾತನ‌ ಕೈಗೆ ನೀಡಿದ್ರು. ಇದು ಎಸಿಬಿ ದಾಳಿ ಅಂತ ಗೊತ್ತಾಗಿದ್ದೇ ಪೇದೆ ಕುಮಾರ ಹಣದ ಸಮೇತ ಎಸ್ಕೇಪ್ ಆಗಲು ಹೋಗಿ ಠಾಣೆಯ ಕಟ್ಟಡದ ಮೊದಲ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸಿಬಿ ಎಸಿಪಿ ಪ್ರತಾಪ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪಿಎಸ್ಐ ಹಾಗೂ ಪೇದೆ ವಿಚಾರಣೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!