‘ರಾಜಿ’ಗೆ ಒಪ್ಪಿಕೊಂಡ ರಾಘಣ್ಣ

612

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದಾಗಿ ಅವರ ಕುಟುಂಬ ಮಾತ್ರವಲ್ಲ, ಚಿತ್ರರಂಗ, ಇಡೀ ಕರ್ನಾಟಕ ವಲ್ಲದೆ ದಕ್ಷಿಣ ಭಾರತದ ರಾಜ್ಯಗಳಲ್ಲೂ ಜನರು ಕಣ್ಣೀರು ಹಾಕಿದರು. ಆ ನೋವಿನಿಂದ ಇದೀಗ ನಿಧಾನವಾಗಿ ಹೊರ ಬರುತ್ತಿದ್ದಾರೆ. ಅಪ್ಪು ಸಹೋದರ ನಟ, ರಾಘವೇಂದ್ರ ರಾಜಕುಮಾರ್ ಈಗ ಮತ್ತೆ ಬಣ್ಣ ಹಚ್ಚಿಕೊಳ್ಳಲು ಸಿದ್ಧರಾಗಿದ್ದಾರೆ.

ಬೆಳಕು ಚಿತ್ರದ ಬಳಿಕ ರಾಘಣ್ಣ ಯಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಇದೀಗ ‘ರಾಜಿ’ ಅನ್ನೋ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಪ್ರೀತಿ ಎಸ್. ಬಾಬು ನಿರ್ದೇಶನದ ಜೊತೆಗೆ ನಟನೆಯನ್ನು ಸಹ ಮಾಡುತ್ತಿದ್ದಾರೆ. ಈಗಾಗ್ಲೇ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರೀತಿ ಎಸ್.ಬಾಬು ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾಗಿದೆ. ಡಿಸೆಂಬರ್ 10ರಂದು ರಾಜಿ ಚಿತ್ರದ ಮುಹೂರ್ತ ನೆರವೇರಲಿದೆ.

ರಾಘವ ಹಾಗೂ ಜೀವತ ಅನ್ನೋ ದಂಪತಿಯ ಸುತ್ತ ಹೆಣೆದಿರುವ ಕಥೆಯಾಗಿದೆ. ಅವರಿಬ್ಬರ ಹೆಸರಿನ ಮೊದಲ ಅಕ್ಷರ ಪಡೆದು ಚಿತ್ರಕ್ಕೆ ಹೆಸರು ಇಡಲಾಗಿದೆ. ಇನ್ನು ವಸುಮತಿ ಉಡುಪ ಅವರ ‘ಪತಿವ್ರತೆಗೆ ಕಿರೀಟಗಳೆಷ್ಟೋ’ ಅನ್ನೋ ಕಥೆಯನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!