‘ಪಟಾಕ’ ಸಂಭಾವನೆಗೆ ಟಾಲಿವುಡ್ ಶಾಕ್

534

ನಟಿ ನಭಾ ನಟೇಶ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಜೊತೆ ವಜ್ರಕಾಯ ಚಿತ್ರದಲ್ಲಿ ನಟಿಸುವ ಮೂಲಕ ಬಿಗ್ ಸ್ಕ್ರೀನ್ ಮೇಲೆ ಎಂಟ್ರಿ ಪಡೆದ್ರು. ಪಟಾಕ ಪಾರ್ವತಿಯ ಬಬ್ಲಿ ರೋಲ್ ಸಾಕಷ್ಟು ಹೆಸರು ತಂದು ಕೊಡ್ತು. ಇದಾದ್ಮೇಲೆ ಟಾಲಿವುಡ್ ನಿಂದ ಆಫರ್ ಗಳು ಬಂದ್ವು.

ನನ್ನು ದೋಚುಕುಂಡುವಂಟೆ, ಇಸ್ಮಾರ್ಟ್ ಶಂಕರ್ ಚಿತ್ರಗಳಲ್ಲಿ ಆ್ಯಕ್ಟ್ ಮಾಡಿದ ನಭಾ ಡಿಮ್ಯಾಂಡ್ ಹೆಚ್ಚಾಯ್ತು. ಇದೀಗ ಟಾಲಿವುಡ್ ಮಾಸ್ ಮಹಾರಾಜ ರವಿ ತೇಜಾ ಜೊತೆ ಡಿಸ್ಕೋ ರಾಜಾ ಚಿತ್ರದಲ್ಲಿ ನಟಿಸ್ತಿದ್ದಾರೆ. ಹೀಗೆ ಸ್ಟಾರ್ ಆಕ್ಟರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಂತೆ ನಟಿ ತನ್ನ ಸಂಭಾವನೆಯನ್ನ ಹೆಚ್ಚು ಮಾಡಿದ್ದಾರಂತೆ. ಹೀಗಾಗಿ ಟಾಲಿವುಡ್ ನಿರ್ಮಾಪಕರು ಶಾಕ್ ಆಗಿದ್ದಾರೆ.

ಎರಡ್ಮೂರು ಚಿತ್ರಗಳಲ್ಲಿ ನಟಿಸಿರುವ ನಟಿಯ ಸಂಭಾವನೆ ಒಂದು ಸಿನ್ಮಾಗೆ 80 ಲಕ್ಷ ರೂಪಾಯಿ ಅಂತಾ ಹೇಳಲಾಗ್ತಿದೆ. ಅಲ್ದೇ, ಯುವ ನಟರೊಂದಿಗೆ ಆ್ಯಕ್ಟ್ ಮಾಡಲ್ಲ ಅಂದಿದ್ದಾಳೆ ಅನ್ನೋದು ಟೀಕೆಗೆ ಗುರಿಯಾಗಿದೆ. ಯಾಕಂದ್ರೆ ಡಿಸ್ಕೋ ರಾಜಾ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ನಟಿ, ಈ ಚಿತ್ರದ ಸಕ್ಸಸ್ ತನ್ಗೆ ಮತ್ತಷ್ಟು ಸ್ಟಾರ್ ಗಿರಿ ಕೊಡುತ್ತೆ ಅಂತಿದ್ದಾಳೆ. ಅದೇನೆ ಇರ್ಲಿ ಸಧ್ಯಕ್ಕೆ ನಟಿಯ ಸಂಭಾವನೆ ಕೇಳಿ ನಿರ್ಮಾಪಕರು ತಬ್ಬಿಬ್ಬು ಆಗಿದ್ದು ಸುಳ್ಳಲ್ಲ.




Leave a Reply

Your email address will not be published. Required fields are marked *

error: Content is protected !!