ಬಾಲಿವುಡ್ ಬಿಗ್ ಬಿ ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ ಕೊಹ್ಲಿ ಪರವಾಗಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದಾರೆ. ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಿ ಎಷ್ಟು ಸಾರಿ ನಿಮ್ಗೆ ಹೇಳೋದು. ಕೊಹ್ಲಿಯನ್ನ ಕೆಣಕಬೇಡಿ ಅಂತಾ ಟ್ವೀಟ್ ಮಾಡಿದ್ದಾರೆ.
2017ರಲ್ಲಿ ಇಂಡೀಸ್ ಪ್ರವಾಸದಲ್ಲಿದ್ದಾಗ ವಿರಾಟ ಕೊಹ್ಲಿ ವಿಕೆಟ್ ಪಡೆದ ವಿಲಿಯಮ್ಸ್ ನೋಟ್ ಬುಕ್ ನಲ್ಲಿ ಸಹಿ ಮಾಡುವ ರೀತಿ ಸಿಗ್ನಲ್ ಕೊಟ್ಟಿದ್ರು. ಇದೀಗ ವಿರಾಟ ಕೊಹ್ಲಿ ವಿಲಿಯಮ್ಸ್ ಬೌಲಿಂಗ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ಅದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ರು.
ವಿರಾಟ ಕೊಹ್ಲಿ ಈ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಟ್ವೀಟ್ ಮೂಲಕ ವೆಸ್ಟ್ ಇಂಡೀಸ್ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.