ಅಸ್ಕಿ ಜಾತ್ರೆ ರದ್ದು

237

ಪ್ರಜಾಸ್ತ್ರ ಸುದ್ದಿ

ತಾಳಿಕೋಟೆ: ವಿಜಯಪುರ ಜಿಲ್ಲೆಯ ನೂತನ ತಾಲೂಕು ತಾಳಿಕೋಟೆ ವ್ಯಾಪ್ತಿಯ ಅಸ್ಕಿ ಗ್ರಾಮದ ಜಾತ್ರೆಯನ್ನ ಈ ಬಾರಿ ರದ್ದು ಮಾಡಲಾಗಿದೆ. ಕೋವಿಡ್ 19 ಮಾರಕ ಕಾಯಿಲೆ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನ ಅನುಸರಿಸಬೇಕಿದೆ. ಹೀಗಾಗಿ ವಿಜೃಂಭಣೆಯ ಜಾತ್ರೆಯ ಬದಲು ಸರಳ ಪೂಜೆ ನೆರವೇರಿಸಲಾಗ್ತಿದೆ.

ಗ್ರಾಮದಲ್ಲಿ ಮಹಾದೇವರ ಜಾತ್ರೆ ತುಂಬಾ ಅದ್ಧೂರಿಯಾಗಿ ನಡೆಯುತ್ತೆ. ನಾಟಕವನ್ನ ಸಹ ಆಯೋಜಿಸಿಕೊಂಡು ಬರಲಾಗುತ್ತೆ. ಹೀಗಾಗಿ ಪರ ಊರುಗಳಲ್ಲಿ ನೆಲೆಸಿರುವ ಗ್ರಾಮದ ಜನರು ಊರ ಜಾತ್ರೆಗೆ ಒಂದು ವಾರ ಮುಂಚಿತವಾಗಿ ಬರುತ್ತಾರೆ. ಆದ್ರೆ, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ. ಕಲಕೇರಿ ಠಾಣೆ ಪಿಎಸ್ಐ ಅವರು ಗ್ರಾಮಸ್ಥರೊಂದಿಗೆ ಮಾತ್ನಾಡಿ, ಸೋಮವಾರ ಅದ್ಧೂರಿ ಜಾತ್ರೆಯ ಬದಲು ಸರಳವಾಗಿ ರಥವನ್ನ ಒಂದಿಷ್ಟು ಎಳೆಯುವ ಮೂಲಕ ಸಂಪ್ರದಾಯ ಉಳಿಸಿಕೊಂಡು ಹೋಗಲು ಮನವಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!