ಕಲಬುರಗಿಯಲ್ಲಿ ಆಟೋ ಚಾಲಕನ ಹತ್ಯೆ

627

ಪ್ರಜಾಸ್ತ್ರ ಅಪರಾಧ ಸುದ್ದಿ

ಕಲಬುರಗಿ: ಆಟೋ ಚಾಲಕನೊಬ್ಬನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಮೊಹ್ಮಮದ ಬಾಬಾ ಅಲಿಯಾಸ್ ಬಂಡಿ ಬಾಬಾ ಕೊಲೆಯಾದ ಆಟೋ ಚಾಲಕನಾಗಿದ್ದಾನೆ.

ಮೊಹ್ಮಮದ ಬಾಬಾ ಹೆಂಡ್ತಿಯ ಜೊತೆಗೆ ಸದಾ ಜಗಳವಾಡ್ತಿದ್ದನಂತೆ. ಹೀಗಾಗಿ ಅವನ ಪತ್ನಿ ಸಹೋದರ ಚಾಂದನನ್ನ ಕರೆದಿದ್ದಾಳೆ. ಗಂಡ ಹೆಂಡ್ತಿಯರ ಜಗಳ ಬಿಡಿಸುವ ವೇಳೆ ಮಾರಕಾಸ್ತ್ರಗಳಿಂದ ಚಾಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡಿದ್ದ ಮೊಹ್ಮಮದ ಬಾಬಾ ಮೃತಪಟ್ಟಿದ್ದಾನೆ.

ಹೀಗೆ ಸಾವನ್ನಪ್ಪಿದ ಮೊಹ್ಮಮದ ಬಾಬಾ ವಿರುದ್ಧ ಚೌಕಿ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿತ್ತು. ಇನ್ನು ಚಾಂದ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಡಿಸಿಪಿ ಡಿ.ಕಿಶೋರಬಾಬು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!