ಎಲ್ಲೆಡೆ ‘ಬೈರಾಗಿ’ ಭರಾಟೆ

184

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ಡಾಲಿ ಧನಂಜಯ್ 2ನೇ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ ಬೈರಾಗಿ ಚಿತ್ರದ ಅಬ್ಬರ ಜೋರಾಗಿದೆ. ಜುಲೈ 1ರಂದು ಚಿತ್ರ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ರೀರಿಲೀಸ್ ಇವೆಂಟ್ ಮಾಡಲಾಗುತ್ತಿದೆ.

ಚಾಮರಾಜನಗರದಲ್ಲಿ ಬೈರಾಗಿ ಇವೆಂಟ್ ಮಾಡಿದ ಚಿತ್ರತಂಡಕ್ಕೆ ಭರ್ಜರಿ ರಸ್ಪಾನ್ಸ್ ಸಿಕ್ಕಿದೆ. ಶಿವಣ್ಣ, ಡಾಲಿ ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರೆ. ಈ ವೇಳೆ ಶಿವಣ್ಣ, ಡಾಲಿ ಡ್ಯಾನ್ಸ್ ನೋಡಿ ಶಿಳ್ಳೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಜೂನ್ 24ರಿಂದ ಬೆಂಗಳೂರಿನಿಂದ ರೋಡ್ ಶೋ ನಡೆಸಲಾಯಿಗಿದೆ. ಬಿಡಿದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮಾರ್ಗದ ಮೂಲಕ ಮೈಸೂರು ತಲುಪಿದೆ. ವೀಕೆಂಡ್ ನಲ್ಲಿ ಚಾಮರಾಜನಗರದಲ್ಲಿ ಕಲರ್ ಫುಲ್ ಇವೆಂಟ್ ನಡೆಸಿತು. ವಿಜಯ್ ಮಿಲ್ಟನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!