ಖತರ್ನಾಕ್ ಕಳ್ಳನ ಬಂಧನ: 15 ಬೈಕ್ ವಶಕ್ಕೆ

461

ಪ್ರಜಾಸ್ತ್ರ ಅಪರಾಧ ಸುದ್ದಿ

ಅಥಣಿ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಖತರ್ನಾಕ ಕಳ್ಳನ ಬಂಧನವಾಗಿದ್ದು, 15 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ದಾಖಲೆ ಇಲ್ಲದ ಬೈಕ್ ಸವಾರನೊಬ್ಬನ ವಿಚಾರಣೆ ಮಾಡಿದಾಗಿ ಕಡಿಮೆ ಹಣಕ್ಕೆ ಬೈಕ್ ಖರೀದಿ ಮಾಡಿರುವುದಾಗಿ ಹೇಳಿದ್ದ.

ಹೀಗೆ ಕಡಿಮೆ ಹಣಕ್ಕೆ ಬೈಕ್ ಮಾರುವವರ ಮೂಲ ಬೆನ್ನು ಹತ್ತಿದ ಅಥಣಿ ಪೋಲಿಸರಿಗೆ ಬೆಳಗಾವಿ, ಬಾಗಲಕೋಟ ಮತ್ತು ಮಹಾರಾಷ್ಟ್ರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕಗಳನ್ನ ಕಳ್ಳತನ ಮಾಡಿ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಶಿರಹಟ್ಟಿ ಗ್ರಾಮದ ರಮಜಾನ ಹುಸೇನಸಾಬ ಐನಾಪುರ ಎಂದು ತಿಳಿದು ಬಂದಿದೆ. ಹದಿನೈದು ಬೈಕಗಳನ್ನ ಪೋಲಿಸರು ವಶಪಡಿಸಿಕೊಂಡಿದ್ದು, ಅಂದಾಜು 5 ಲಕ್ಷ ಮೌಲ್ಯವಾಗಿದೆ. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಳಗಾವಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಅಧೀಕ್ಷಕ ಅಮರನಾಥ ರೆಡ್ಡಿ ಇವರ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಎಸ್.ವಿ.ಗೀರಿಶ, ಸಿಪಿಐ ಶಂಕರಗೌಡ ಬಸನಗೌಡರ ಇವರ ಉಸ್ತುವಾರಿಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಎಮ್.ಡಿ ಘೋರಿ ಅವರ ನೇತೃತ್ವದ ಎಎಸ್ಐ ವಿ.ಜಿ ಆರೇರ, ಸಿಬ್ಬಂದಿ ಎ.ಎ.ಈರಕಾರ, ಎಸ್.ಕೆ.ನೇಮಗೌಡ, ಪಿ.ಬಿ.ನಾಯಕ, ಎಮ್.ಬಿ ದೊಡಮನಿ, ಬಿ.ಜೆ.ತಳವಾರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.




Leave a Reply

Your email address will not be published. Required fields are marked *

error: Content is protected !!