Search

ಬಸ್ ಅಪಘಾತ, 12 ಜನರ ದುರ್ಮರಣ

157

ಪ್ರಜಾಸ್ತ್ರ ಸುದ್ದಿ

ಮಹಾರಾಷ್ಟ್ರ: ಖಾಸಗಿ ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದು 12 ಪ್ರಯಾಣಿಕರು ಮೃತಪಟ್ಟ ಘಟನೆ ರಾಯಗಢದಲ್ಲಿ ಶನಿವಾರ ಮುಂಜಾನೆ ನಡೆದಿದೆ. 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

40 ಪ್ರಯಾಣಿಕರು ಇರುವ ಬಸ್ ಪುಣೆಯಿಂದ ಮುಂಬೈಗೆ ಹೊರಟಿತ್ತು. ಪುಣೆ-ಮುಂಬೈ ಹೆದ್ದಾರಿ ಖೋಪೋಲಿಯಲ್ಲಿ ಹೋಗುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡು 40ರಿಂದ 50 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅತಿಯಾದ ವೇಗದ ಚಾಲನೆಯೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!