ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 13 ಮಂದಿ ಬಂಧನ

198

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನಗರದಲ್ಲಿ ಮಹಿಳೆಯೊಬ್ಬರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣ ಸಂಬಂಧ, 13 ಜನರನ್ನು ಬಂಧಿಸಲಾಗಿದೆ.

ಘಟಪ್ರಭಾ ಮೃತ್ಯಂಜಯ ಸರ್ಕಲ್ ಹತ್ತಿರ ಮಹಿಳೆಯ ಮನೆಗೆ ನುಗ್ಗಿದ ಕೆಲವರು ಆಕೆ ಮೇಲೆ ಹಲ್ಲೆ ಮಾಡಿ, ನಂತರ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದರು. ಈ ಸಂಬಂಧ ಮಹಿಳೆ ದೂರಿನ ಆಧಾರದ ಮೇಲೆ 13 ಜನರನ್ನು ಬಂಧಿಸಲಾಗಿದೆ.

ಹಲ್ಲೆಗೊಳಗಾದ ಮಹಿಳೆ ಹನಿಟ್ರ್ಯಾಪ್ ಮೂಲಕ ಹಣ ವಸೂಲಿ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಇದೆ ವಿಷಯವಾಗಿ ಸಂಘಟನೆಯೊಂದರ ಕೆಲ ಸದಸ್ಯರು 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಆಕೆ ನಾನ್ಯಾಕೆ ಕೊಡಬೇಕು. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ಹೇಳಿದ್ದಾಳಂತೆ. ಇತ್ತೀಚೆಗೆ ಮಧ್ಯರಾತ್ರಿ ಮಹಿಳೆ ಮನೆಗೆ ಬಂದು ಗಲಾಟೆ ಮಾಡಿದ್ದು, ಹಲ್ಲೆ ಮಾಡಿ ಚಪ್ಪಲಿ ಹಾರಿ ಹಾಕಿ ಮೆರವಣಿಗೆ ನಡೆಸಲಾಗಿದೆ ಸಂತ್ರಸ್ತೆ ಹೇಳಿದ್ದಾಳೆ. ಈ ಸಂಬಂಧ 13 ಜನರ ಬಂಧನವಾಗಿದೆ.




Leave a Reply

Your email address will not be published. Required fields are marked *

error: Content is protected !!