ಮನುಷ್ಯರಿಂದ ಮನುಷ್ಯರಿಗೆ ಕರೋನಾ: ಪ್ರಜಾಸ್ತ್ರದಲ್ಲಿ ಗೃಹ ಸಚಿವರ ಮಾತು

417

ಬೆಂಗಳೂರು: ಕರೋನಾವನ್ನ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ ಸಕಲ ರೀತಿಯಿಂದ ಪ್ರಯತ್ನ ಪಡ್ತಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಆದಿಯಾಗಿ ಪ್ರತಿಯೊಬ್ಬರು ಸತತ ಕೆಲಸಗಳನ್ನ ಮಾಡ್ತಿದ್ದಾರೆ. ಅದೇ ರೀತಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹ ಕರೋನಾ ವಿರುದ್ಧದ ಹೋರಾಟದಲ್ಲಿ ಭರ್ಜರಿ ಕೆಲಸ ನಡೆಸಿದ್ದಾರೆ.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಕರೋನಾ ವಿರುದ್ಧ ಶಕ್ತಿಮೀರಿ ಕೆಲಸ ನಡೆಸಿದ್ದಾರೆ. ಇಡೀ ದೇಶ ಲಾಕ್ ಡೌನ್ ಆಗಿದೆ. 144 ಸೆಕ್ಷನ್ ಜಾರಿಯಲ್ಲಿದೆ. ಇಂಥಾ ಟೈಂನಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯಿಂದ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದರ ಜೊತೆಗೆ ನಾಡಿನ ಜನರಲ್ಲಿ ಕರೋನಾ ಕುರಿತು ಜಾಗೃತಿ ಮೂಡಿಸಿದ್ದು, ದಯವಿಟ್ಟು ಯಾರು ಮನೆಯಿಂದ ಆಚೆ ಬರಬೇಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ಕುರಿತ ಎಕ್ಸ್ ಕ್ಲೂಸೀವ್ ವಿಡಿಯೋ ಪ್ರಜಾಸ್ತ್ರದಲ್ಲಿ ಮಾತ್ರ ಲಭ್ಯವಿದೆ.

ಪ್ಲೇಗ್ ಬಂದಾಗ ಇಲಿಯಿಂದ ಅಂದ್ರು, ಹಕ್ಕಿ ಜ್ವರ ಬಂದಾಗ ಕೋಳಿಯಿಂದ ಅಂತಿದ್ರು. ಇದೀಗ ಕರೋನಾ ಅನ್ನೋದು ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಅಂತಾ ಹೇಳಲಾಗ್ತಿದೆ. ಹೀಗಾಗಿ ಈ ಬಗ್ಗೆ ಜನರು ಜಾಗೃತರಾಗಿರಬೇಕು. ಬದುಕಿಗಿಂತ ಯಾವುದೂ ದೊಡ್ಡದು ಅಲ್ಲವೆಂದು ಗೃಹ ಸಚಿವರು ಹೇಳಿದ್ದಾರೆ. ಒಂದು ವೇಳೆ ಕೈ ಮೀರಿದ್ರೆ ಯಾವುದೇ ಸರ್ಕಾರ ಎಷ್ಟೇ ಪ್ರಯತ್ನ ಮಾಡಿದ್ರೂ ಅದನ್ನ ಕಂಟ್ರೋಲ್ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!