ಡ್ರಗ್ಸ್ ಕೇಸ್: ನಿನ್ನೆ ನಟಿ ಬಂಧನ.. ಇಂದು ಆಕೆ ಪತಿ ಅರೆಸ್ಟ್

443

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯ ನಟಿ ಭಾರತಿ ಸಿಂಗ್ ಳನ್ನ ಎನ್ ಸಿಬಿ ಅಧಿಕಾರಿಗಳು ಶನಿವಾರ ಬಂಧಿಸಿದ್ರು. ಭಾನುವಾರ ಬೆಳಗ್ಗೆ ಆಕೆಯ ಪತಿ ಹರ್ಷಾ ಲಿಂಬಾಚಿಯಾರನ್ನ ಬಂಧಿಸಲಾಗಿದೆ. ಇದರೊಂದಿಗೆ ಮಾದಕ ವಸ್ತು ಪ್ರಕರಣದಲ್ಲಿ ಪತಿ, ಪತ್ನಿಯ ಬಂಧನವಾಗಿದೆ.

ಶನಿವಾರ ಹಾಸ್ಯನಟಿ ಭಾರತಿ ಸಿಂಗ್ ಮನೆಯ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಈ ವೇಳೆ ಅಲ್ಪ ಪ್ರಮಾಣದಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಸಂಜೆ ನಟಿಯನ್ನ ಎನ್ ಡಿಪಿಎಸ್ ಕಾಯ್ದೆ 1986ರ ಅಡಿಯಲ್ಲಿ ಬಂಧಿಸಿದ್ರು. ಭಾನುವಾರ ಮುಂಜಾನೆ ಪತಿಯ ಬಂಧನವಾಗಿದೆ.

ಡ್ರಗ್ಸ್ ಪೆಡ್ಲರ್ ವೊಬ್ಬ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದ. ಹೀಗಾಗಿ ಇವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಹಲವು ಕಾಮಿಡಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಭಾರತಿ ಸಿಂಗ್, ಕೆಲ ಶೋಗಳಿಗೆ ನಿರೂಪಣೆ ಸಹ ಮಾಡ್ತಾರೆ.




Leave a Reply

Your email address will not be published. Required fields are marked *

error: Content is protected !!