ಜಾನಮಟ್ಟಿಯಲ್ಲಿ ಕರೋನಾ ಕೇಸ್: ಆತಂಕದಲ್ಲಿ ಗ್ರಾಮಸ್ಥರು

311

ಪ್ರಜಾಸ್ತ್ರ ಸುದ್ದಿ

ಬೀಳಗಿ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಜಾನಮಟ್ಟಿಯಲ್ಲಿ ಮೊದಲ ಕರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. 63 ವರ್ಷದ ವ್ಯಕ್ತಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಇದ್ರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಇನ್ನು ಸೋಂಕು ಪತ್ತೆಯಾದ ಸ್ಥಳದಿಂದ 100 ಮೀಟರ್ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಆ ಪ್ರದೇಶದಲ್ಲಿ ಮುಳ್ಳುಕಂಟಿಗಳನ್ನ ಇಡಲಾಗಿದೆ. ಗ್ರಾಮಗಳಲ್ಲಿ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತವಾಗುತ್ತಿವೆ. ಇದ್ರಿಂದಾಗಿ ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ್ ಬಳಸುವಂತೆ ಬೀಳಗಿ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.

ಇಷ್ಟು ದಿನಗಳ ಕಾಲ ನಗರಕ್ಕೆ ಸಿಮೀತವಾಗಿದ್ದ ಸೋಂಕು ನಿಧಾನವಾಗಿ ಗ್ರಾಮಕ್ಕೆ ವ್ಯಾಪಾಸಿಕೊಳ್ತಿರುವುದಕ್ಕೆ ಮತ್ತೆ ಮತ್ತೆ ಇಂಥಹ ಪ್ರಕರಣಗಳು ಸಾಕ್ಷಿಯಾಗ್ತಿವೆ. ಹೀಗಾಗಿ ನಗರ ಜನರಂತೆ ಗ್ರಾಮೀಣ ಭಾಗದ ಜನರು ಮೈಮರೆಯುವುದು ಬೇಡವೆಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!