ಮೊದಲ ಬಾರಿಗೆ ಈ ಹಳ್ಳಿಗೆ ವಿದ್ಯುತ್ ಸಂಪರ್ಕ

427

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತಕ್ಕೆ ಸ್ವತಂತ್ರ ಸಿಕ್ಕು 75 ವರ್ಷವಾಗಿದೆ. ಹೀಗಿದ್ದರೂ ಅದೆಷ್ಟೋ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳೇ ಸರಿಯಾಗಿ ಸಿಕ್ಕಿಲ್ಲ. ಆದರೆ, ಜನ ನಾಯಕರು ಎಲ್ಲವೂ ಸಾಧಿಸಿದ್ದೇವೆ ಎನ್ನುತ್ತಾರೆ. ಆದರೆ, ವಾಸ್ತವ ಬೇರೆ ಅನ್ನೋದಕ್ಕೆ ಕಣಿವೆ ನಾಡಿನ ಈ ಹಳ್ಳಿ ತಾಜಾ ಉದಾಹರಣೆ.

ಜಮ್ಮು ಕಾಶ್ಮೀರದ ಉಧಂಪುರ ಸಡ್ಡಲ್ ಅನ್ನೋ ಹಳ್ಳಿಗೆ ಇದೀಗ ವಿದ್ಯುತ್ ಸಂಪರ್ಕ ಸಿಕ್ಕಿದೆ ಅಂದರೆ ನಂಬಲೇಬೇಕು. ಹಲವು ಬಾರಿ ಮನವಿ ಸಲ್ಲಿಸುತ್ತಾ ಬಂದರೂ ಯಾವ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹೀಗಾಗಿ ಮೇಣದ ಬತ್ತಿ, ಚಿಮಣಿ ಬೆಳಕಿನಲ್ಲೇ ಬದುಕು ದೂಡುತ್ತಿದ್ದರು.

ಕೇಂದ್ರ ಸರ್ಕಾರದ ಯುನೈಟೆಡ್ ಗ್ರಾಂಟ್ಸ್ ಸ್ಕೀಮ್ ಅಡಿಯಲ್ಲಿ ಸಡ್ಡಲ್ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದ್ದರಿಂದಾಗಿ ಗ್ರಾಮಸ್ಥರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ತಮ್ಮ ಬಹುಕಾಲದ ಬೇಡಿಕೆ ಈಡೇರಿದ್ದಕ್ಕೆ ಖುಷಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!