‘ಭಾರತ ಪಿತಾಮಹ’ ಹೇಳಿಕೆಗೆ ಗಾಂಧಿ ಮರಿಮೊಮ್ಮಗ ತಿರುಗೇಟು

574

ಮುಂಬೈ: ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾಗ, ಅಧ್ಯಕ್ಷ ಡೂನಾಲ್ಡ್ ಟ್ರಂಪ್ ಮೋದಿಯನ್ನ ಹಾಡಿ ಹೊಗಳಿದ್ರು. ಇದರ ಜೊತೆಗೆ ಮೋದಿ ಭಾರತದ ಪಿತಾಮಹರೆನಿಸಬಹುದು ಅಂತಾ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ರು. ಈ ಹೇಳಿಕೆಗೆ ಗಾಂಧಿ ಮರಿಮೊಮ್ಮಗ ತುಷಾರ ಗಾಂಧಿ ತಿರುಗೇಟು ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು, ಅಮೆರಿಕಾ ಪಿತಾಮಹರೊಬ್ಬರು ಎನಿಸಿಕೊಂಡಿರುವ ಜಾರ್ಜ್ ವಾಷಿಂಗ್ಟನ್ ಸ್ಥಾನದಲ್ಲಿ ಗುರುತಿಸಿಕೊಳ್ಳಲು ರೆಡಿಯಿದ್ದಾರೆಯೇ ಅಂತಾ ಪ್ರಶ್ನೆ ಮಾಡಿದ್ದಾರೆ. ಗಾಂಧಿ ಅವರ 150ನೇ ಜನ್ಮದಿನಚಾರಣೆಯನ್ನ ಅದ್ಧೂರಿಯಾಗಿ ಆಚರಿಸಲಾಗ್ತಿರುವುದು ಸಾಂಕೇತಿಕವಷ್ಟೆ. ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡ್ತಿಲ್ಲ ಎಂದಿದ್ದಾರೆ.

ಗಾಂಧಿ ಸ್ಥಾನದಲ್ಲಿ ಬೇರೆಯವರನ್ನ ತಂದು ನಿಲ್ಲಿಸಿದ್ರೆ ಸ್ವಾಗತ. ಹೀಗೆ ಹೇಳ್ತಿರುವ ಟ್ರಂಪ್ ಅವರು, ಜಾರ್ಜ್ ವಾಷಿಂಗ್ಟನ್ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ತುಷಾರ ಗಾಂಧಿ ಪ್ರಶ್ನಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!