ಮುದ್ದೇಬಿಹಾಳದಲ್ಲಿ ಯುವತಿ ಶವ ಪತ್ತೆ

331

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ಹೊರವಲಯದಲ್ಲಿನ ಸೇತುವೆ ಕೆಳಗೆ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಸುಮಾರು 20 ವರ್ಷದ ಯುವತಿಯ ಶವ ಬುಧವಾರ ಪತ್ತೆಯಾಗಿದೆ.

ಯುವತಿಯ ತಲೆಗೆ ಬಲವಾದ ಕಲ್ಲಿನ ಏಟು ಬಿದ್ದಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ. ಇಲ್ಲ ಯಾರೋ ಮೊದ್ಲು ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಕಲ್ಲು ಎತ್ತಿ ಹಾಕಲಾಗಿದೆ ಅನ್ನೋ ಶಂಕೆಯೂ ವ್ಯಕ್ತವಾಗಿದೆ. ಈ ಬಗ್ಗೆ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!