ಹಿಮಚಲದಲ್ಲಿ 55 ಜನರ ಸಾವು, ಸಾಂಸ್ಕೃತಿಕ ಕಾರ್ಯಕ್ರಮ ರದ್ದು

272

ಪ್ರಜಾಸ್ತ್ರ ಸುದ್ದಿ

ಶಿಮ್ಲಾ: ಮೇಘಸ್ಫೋಟದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಭೂ ಕುಸಿತಗಳು ಸಂಭವಿಸುತ್ತಿವೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 55 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂಭ್ರಮದ ಹೊತ್ತಿನಲ್ಲಿ ಹಿಮಾಚಲದಲ್ಲಿ ಕರಾಳ ದಿನವಾಗಿದೆ.

ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಮಾತನಾಡಿ, ಸಚಿವರು ಧ್ವಜಾರೋಹರಣ ಮಾತ್ರ ಮಾಡುತ್ತಾರೆ. ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಪೊಲೀಸ್, ಎಸ್ ಡಿಆರ್ ಎಫ್ ಹಾಗೂ ಪರೇಡ್ ನಲ್ಲಿ ಭಾಗವಹಿಸುವ ಇತರೆ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿರುತ್ತಾರೆ ಎಂದಿದ್ದಾರೆ.

ಈ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಸುಖವಿಂದರ್ ಸಿಂಗ್ ಜೊತೆಗೆ ಮಾತನಾಡಿದ್ದು, ಕೇಂದ್ರಿಂದ ನೆರವು ಕೊಡಿಸುವ ಕುರಿತು ಭರವಸೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!