ಬ್ರೇಕಿಂಗ್ ನ್ಯೂಸ್
Search

ಪಂಥ್ ಶತಕ.. ಭಾರತಕ್ಕೆ ಸರಣಿ

322

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿಯಾಗಿ ಆಲ್ ರೌಂಡರ್ ಆಟ ಪ್ರದರ್ಶನ ನೀಡಿರುವುದರಿಂದ 2-1 ಅಂತರದಿಂದ ಸರಣಿ ಕೈ ವಶ ಮಾಡಿಕೊಂಡಿದೆ. ಕೀಪರ್ ರಿಷಬ್ ಪಂಥ್ ಭರ್ಜರಿಯಾಗಿ ನಾಟೌಟ್ 125 ಹಾಗೂ ಹಾರ್ದಿಕ್ ಪಾಂಡ್ಯೆ 71 ರನ್ ಗಳ ಆಟದಿಂದಾಗಿ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಜಯ ಸಾಧಿಸಿತು.

ಶರ್ಮಾ 17, ಧವನ್ 1, ಕೊಹ್ಲಿ 17, ಸೂರ್ಯಕುಮಾರ್ ಯಾದವ್ 16, ಜಡೇಜಾ 7 ರನ್ ಗಳಿಸಿದರು. ಇಂಗ್ಲೆಂಡ್ ಪರ ಟೊಪ್ಲೆ 3 ವಿಕೆಟ್ ಪಡೆದು ಮಿಂಚಿದರು. ಕ್ರಿಸ್ ಹಾಗೂ ಓವರ್ಟನ್ ತಲಾ 1 ವಿಕೆಟ್ ಪಡೆದರು.

ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯೆ(4 ವಿಕೆಟ್, 71 ರನ್) ಪಂದ್ಯ ಶ್ರೇಷ್ಠನಾದರು. ಇನ್ನು ರಿಷಬ್ ಪಂತ್ ತನ್ನ ಮೊದಲ ಶತಕವನ್ನು ಭರ್ಜರಿಯಾಗಿ ಸಿಡಿಸಿ ಭಾರತ ಗೆಲುವಿಗೆ ಕಾರಣರಾದರು.




Leave a Reply

Your email address will not be published. Required fields are marked *

error: Content is protected !!