ಕೇಂದ್ರದ ಜಿಎಸ್ ಟಿ ಎಫೆಕ್ಟ್: ಹಾಲು, ಮೊಸರು, ಮಜ್ಜಿಗೆ ದುಬಾರಿ

397

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19ನಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಬೆಲೆ ಏರಿಕೆಯ ಗಾಯದ ನಡುವೆ ಜನರು ಅದ್ಹೇಗೋ ಜೀವನ ಮಾಡುತ್ತಿದ್ದಾರೆ. ಹೀಗಿರುವಾ ಜನಸಾಮಾನ್ಯರಿಗೆ ಆಗಿರುವ ಗಾಯದ ಮೇಲೆ ಕೇಂದ್ರ ಸರ್ಕಾರ ಜಿಎಸ್ ಟಿ ಉಪ್ಪು ಸವರಿದೆ. ಹೀಗಾಗಿ ಸೋಮವಾರದಿಂದ ಹಾಲು, ಮೊಸರು, ಮಜ್ಜಿಗೆ ದರ ಏರಿಕೆಯಾಗಲಿದೆ.

ನೂತನ ದರ ಜಾರಿಯಿಂದ 1 ರೂಪಾಯಿಯಿಂದ 3 ರೂಪಾಯಿ ತನಕ ಏರಿಕೆಯಾಗಲಿದೆ. ಹಾಲಿನ ಉತ್ಪನ್ನಗಳು, ದವಸ ಧಾನ್ಯಗಳು, ಸ್ಟೇಷನರಿ ವಸ್ತುಗಳು, ಪಾದರಕ್ಷೆಗಳು, ಹೋಟೆಲ್, ಆಸ್ಪತ್ರೆಗಳ ಮೇಲೆ ಶೇಕಡ 12ರಷ್ಟು ಜಿಎಸ್ ಟಿ ವಿಧಿಸಿರುವುದರಿಂದ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಕೆಎಂಎಫ್ ಹೇಳಿದೆ.




Leave a Reply

Your email address will not be published. Required fields are marked *

error: Content is protected !!