ನ್ಯೂಜಿಲೆಂಡ್ ಟೀಂ ಭಾರತ ಪ್ರವಾಸ: ಆಟಗಾರರ ಪಟ್ಟಿ ಹೀಗಿದೆ..

250

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಮುಗಿಯುತ್ತದಂತೆ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸರಣಿ ಶುರುವಾಗಲಿದೆ. 3 ಟಿ-20 ಹಾಗೂ 2 ಟೆಸ್ಟ್ ಸರಣಿ ನವೆಂಬರ್ 25ರಿಂದ ಶುರುವಾಗಲಿದೆ. ಡಿಸೆಂಬರ್ 7ರ ತನಕ ಪಂದ್ಯಗಳು ನಡೆಯಲಿವೆ. ಹೀಗಾಗಿ 15 ಆಟಗಾರರನ್ನೊಳಗೊಂಡ ತಂಡದ ಲಿಸ್ಟ್ ನ್ನು ಕಿವೀಸ್ ಬಿಡುಗಡೆ ಮಾಡಿದೆ.

ಕೇನ್ ವಿಲಿಯಮ್ಸನ್(ನಾಯಕ), ಟಾಮ್ ಲ್ಯಾಥಮ್, ಕೈಲ್ ಜೇಮಿಸನ್, ಹೆನ್ರಿ ನಿಕೋಲ್ಸ್, ಟಾಂಮ್ ಬ್ಲಂಡೆಲ್(ವಿಕೆಟ್ ಕೀಪರ್), ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಅಜಾಜ್ ಪಟೇಲ್, ರಚಿನ್ ರವೀಂದ್ರ, ಮಿಚೆಲ ಸ್ಯಾಂಟ್ನರ್, ರಾಸ್ ಟೇಲರ್, ಟಿಮ್ ಸೌಥಿ, ವಿಲ್ ಯಂಗ್, ನೈಲ್ ವಾಗ್ನರ್, ವಿಲ್ ಸೋಮರ್ವಲ್ಲೆ ಸೇರಿ 15 ಆಟಗಾರರ ತಂಡವನ್ನು ಪ್ರಕಟಿಸಿದೆ.

ನವೆಂಬರ್ 14 ರಂದ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯ ನಡೆಯಲಿದೆ. ನವೆಂಬರ್ 17ರಂದು ಭಾರತ-ನ್ಯೂಜಿಲೆಂಡ್ ಟಿ-20 ಸರಣಿ ಶುರುವಾಗಲಿದೆ. ನವೆಂಬರ್ 25ರಿಂದ ಡಿಸೆಂಬರ್ 7ರ ತನಕ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!