ಪಾಕ್ ವಿರುದ್ಧ ಗೆದ್ದ 15 ಗಂಟೆಯಲ್ಲೇ ಭಾರತ ಲಂಕಾ ಕದನ

225

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲಂಬೊ: ಮಳೆಯಿಂದಾಗಿ ಮೀಸಲು ದಿನದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ, ಗಿಲ್ ಅರ್ಧ ಶತಕ, ಕೊಹ್ಲಿ, ಕೆ.ಎಲ್ ರಾಹುಲ್ ಶತಕದಾಟ ಪಾಕ್ ಪಡೆಯನ್ನು ಧೂಳಿಪಟ ಮಾಡಿದೆ.

ಭಾರತ ನೀಡಿದ 356 ರನ್ ಗಳ ಗುರಿ ಮುಟ್ಟಲು ಸಾಧ್ಯವಾಗದೆ ಸೋಲು ಅನುಭವಿಸಿದೆ. 32 ಓವರ್ ಗಳಲ್ಲಿ 128 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ ಭಾರತ 228 ರನ್ ಗಳ ದೊಡ್ಡ ಅಂತರದಿಂದ ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.

ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದು ದಾಖಲೆ ಬರೆದರು. ಬೂಮ್ರಾ, ಪಾಂಡ್ಯ, ಠಾಕೂರ್ ತಲಾ 1 ವಿಕೆಟ್ ಪಡೆದರು. ಇನ್ನು ಇಂದು ಮಧ್ಯಾಹ್ನ ಶ್ರೀಲಂಕಾ ವಿರುದ್ಧ ಭಾರತ ಕಣಕ್ಕೆ ಇಳಿಯಲಿದೆ. ಈ ಮೂಲಕ ಸತತವಾಗಿ ಮೂರು ದಿನಗಳ ಕಾಲ ಪಂದ್ಯವಾಡಿದಂತೆ ಆಗಲಿದೆ.




Leave a Reply

Your email address will not be published. Required fields are marked *

error: Content is protected !!