ಭಾರತ 109ಕ್ಕೆ 2 ವಿಕೆಟ್

589

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೊಹಾಲಿ: ಶ್ರೀಲಂಕಾ ವಿರುದ್ಧ 3 ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಭಾರತ ತಂಡ ಇಂದನಿಂದ ಟೆಸ್ಟ್ ಸರಣಿ ಆಡುತ್ತಿದೆ. ಅಲ್ದೇ ರೋಹಿತ್ ಶರ್ಮಾ ನಾಯಕನಾದ ನಂತರ ಮೊದಲ ಟೆಸ್ಟ್ ಸರಣಿಯಾಗಿದೆ. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಈಗಾಗ್ಲೇ ಬ್ಯಾಟಿಂಗ್ ಮಾಡುತ್ತಿರುವ ಭಾರತ ಲಂಚ್ ಬ್ರೇಕ್ ವೇಳೆಗೆ 2 ವಿಕೆಟ್ ನಷ್ಟಕ್ಕೆ 109 ರನ್ ಕಲೆ ಹಾಕಿದೆ. ಹನುಮ ವಿಹಾರಿ 30, ಲಸಿತ್ 1 ರನ್ ಗಳಿಸಿ ಆಡುತ್ತಿದ್ದಾರೆ. 100 ಟೆಸ್ಟ್ ಪಂದ್ಯ ಆಡುತ್ತಿರುವ ಕೊಹ್ಲಿ 4 ರನ್ ಗೆ ಔಟ್ ಆಗಿದ್ದಾರೆ. ಇನ್ನು 33 ರನ್ ಗಳಿಗೆ ಮಯಾಂಕ್ ಅಗರ್ವಾಲ್ ಔಟ್ ಆಗಿದ್ದಾರೆ.

ಕೊಹ್ಲಿಗೆ 100ನೇ ಟೆಸ್ಟ್ ಪಂದ್ಯ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ಈ ಬಗ್ಗೆ ಮಾತನಾಡಿರುವ ಕ್ಯಾಪ್ಟನ್ ರೋಹಿತ್, ಎಲ್ಲರಿಗೂ 100 ಟೆಸ್ಟ್ ಪಂದ್ಯಗಳನ್ನು ಆಡಲು ಆಗುವುದಿಲ್ಲ. ವಿರಾಟ್ ಅಂತಹದೊಂದು ಮೈಲುಗಲ್ಲು ಸಾಧಿಸಿದ್ದಾರೆ. ಅವರು ಮಾಡಿರುವ ಶ್ರೇಷ್ಠ ಕೆಲಸವನ್ನು ನಾನು ಮುಂದುವರೆಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!