ಭಾರತದ ಜಿಡಿಪಿ ದಾಖಲೆಯ ಕುಸಿತ!

352

ಪ್ರಜಾಸ್ತ್ರ ವಾಣಿಜ್ಯೋದ್ಯಮ

ನವದೆಹಲಿ: ಕರೋನಾ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ. ಇದೀಗ ಭಾರೀ ಆರ್ಥಿಕ ಕುಸಿತ ಅನುಭವಿಸುವ ಸಾಧ್ಯತೆಯಿದೆ. ರಾಯಿಟರ್ಸ್ ಸಮೀಕ್ಷೆ ಪ್ರಕಾರ ಜೂನ್ ತ್ರೈಮಾಸಿಕದಲ್ಲಿ ಶೇಕಡ 18.3ರಷ್ಟು ಕುಸಿಯಲಿದೆ ಎಂದು ಅಂದಾಜಿಸಿದ್ದಾರೆ.

ಅಲ್ದೇ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 8.1 ಹಾಗೂ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 1ರಷ್ಟು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದ್ರಿಂದಾಗಿ ಹಣಕಾಸು ವರ್ಷದಲ್ಲಿ ಕೆಟ್ಟ ಪರಿಸ್ಥಿತಿ ನಿರೀಕ್ಷಿಸಲಾಗಿದೆ.

ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಿಸಿದ್ರೂ ಆರ್ಥಿಕತೆ ಚೇತರಿಕೆಗೆ ಸಮಯ ತೆಗೆದುಕೊಳ್ಳಲಿದೆ. ಸ್ವಾತಂತ್ರ್ಯ ಪಡೆದ ನಂತರ ಇದು ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!