ಇಂದು ಆಪ್ ಮೊದಲ ಪಟ್ಟಿ ಬಿಡುಗಡೆ

188

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಯಾರಿ ಬಿರುಸಿನಿಂದ ಕೂಡಿದೆ. ಜೆಡಿಎಸ್ ಈಗಾಗ್ಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸಂಭವನೀಯ ಪಟ್ಟಿ ಬಿಡುಗಡೆಯಾಗಿದೆ. ಇದೀಗ ಆಪ್ ತನ್ನ ಮೊದಲ ಪಟ್ಟಿ ಇಂದು ಮಧ್ಯಾಹ್ನ 12.30ಕ್ಕೆ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

ಕುಮಾರ್ ಪಾರ್ಕ್ ವೆಸ್ಟ್ ರಸ್ತೆಯ ರೈಲ್ವೆ ಪ್ಯಾರಲರ್ ರಸ್ತೆಯಲ್ಲಿರುವ ಆಪ್ ಕಚೇರಿಯಲ್ಲಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ವೇಳೆ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯಾಧ್ಯಕ್ಷರು ಸೇರಿ ಹಲವು ಮುಖಂಡರು ಭಾಗವಹಿಸಲಿದ್ದಾರೆ.

ಈಗಾಗ್ಲೇ ದೆಹಲಿ, ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಆಪ್, ಗುಜರಾತಿನಲ್ಲಿ ಶೇಕಡವಾರ ಮತದನಲ್ಲಿಯೂ ಹೆಚ್ಚಳ ಕಾಣುವ ಮೂಲಕ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ. ಹೀಗಾಗಿ ಇದೀಗ ಕರ್ನಾಟಕದ ಮೇಲೆ ಕಣ್ಣಿದೆ. ಮೊದಲ ಪಟ್ಟಿಯಲ್ಲಿ ಯಾರೆಲ್ಲರ ಹೆಸರು ಇರಲಿದೆ ಅನ್ನೊ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!