ಭೂಸನೂರಗೆ ಅಪ್ಪ-ಮಗನ ಸವಾಲು

542

ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ ಮಾಡಿರುವ ಭೂ ಕಬಳಿಕೆ ಆರೋಪಕ್ಕೆ, ಶಾಸಕ ಎಂ.ಸಿ ಮನಗೂಳಿ ಹಾಗೂ ಅವರ ಪುತ್ರ, ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಅವರು ಪ್ರತ್ಯುತ್ತರ ಕೊಟ್ಟಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿದ ಶಾಸಕರು, ನಾವು ಯಾವ ಆಸ್ತಿನೂ ಕಬಳಿಸಿಲ್ಲ. ಯಾವುದೇ ಮೋಸ, ವಂಚನೆ ಮಾಡಿ ಆಸ್ತಿನೂ ನಮ್ಮ ಹೆಸರಿಗೆ ಮಾಡಿಕೊಂಡಿಲ್ಲ. ಅದೇನಾದ್ರು ಇದ್ರೆ ದಾಖಲೆ ತೋರಿಸಲಿ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಅವರು ರಾಜಕೀಯ ನಿವೃತ್ತಿ ಆಗಬೇಕು ಎಂದು ಮಾಜಿ ಶಾಸಕ ರಮೇಶ ಭೂಸನರಿಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಸೇರಲು ಸಿಎಂ ಯಡಿಯೂರಪ್ಪನವರನ್ನ ಭೇಟಿಯಾಗಿದ್ದಾರೆ ಅನ್ನೋ ಆರೋಪಕ್ಕೆ ಉತ್ತರಿಸಿದ ಅವರು, ಬಿಜೆಪಿ ಸೇರಕ್ಕ ನಾವು ಹೋಗಿಲ್ಲ. ಬರ್ರಿ ಎಂದು ಅವರು ಕರೆದಿಲ್ಲ. ಮಂಜೂರಾದ ಕೆಲಸಗಳಿಗೆ ಹಣ ಬಿಡುಗಡೆ ಮಾಡಿ ಎಂದು ಕೇಳಲು ಹೋಗಿದ್ದೆ. 6 ಕೋಟಿ ರಿಂಗ್ ರೋಡಿಗೆ, 5 ಕೋಟಿ ತಾಲೂಕು ಅಭಿವೃದ್ಧಿ, 5 ಕೋಟಿ ತೋಟಗಾರಿಕೆ ಕಾಲೇಜು, 1 ಕೋಟಿ ಮಾರ್ಕೆಟ್ ಜಾಗಕ್ಕೆ ಹಣ ಬಿಡುಗಡೆಗೆ ತಕ್ಷಣ ಆದೇಶ ಹೊರಡಿಸಿದ್ರು. ಅವರು ಆರೂವರೆ ಕೋಟಿ ಜನರ ನಾಯಕ, ಅವರು ಇದ್ದಲ್ಲಿ ನಾವು ಹೋಗಬೇಕು ಅಂತಾ ಹೇಳುವ ಮೂಲಕ ತಿರುಗೇಟು ನೀಡಿದ್ರು.

ಇನ್ನು ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಮಾತ್ನಾಡಿ, ಭೂ ಕಬಳಿಕೆಗೆ ಸಂಬಂಧಸಿದಂತೆ ಒಂದೇ ಒಂದು ದಾಖಲೆ ಪ್ರದರ್ಶನ ಮಾಡಲಿ. ಅವರಿಗೆ ಒಂದು ವಾರ ಟೈಂ ಕೊಡ್ತೀವಿ. ನಮ್ಮ ಮನೆತನದವರು ರಾಜಕೀಯ ನಿವೃತ್ತಿ ಪಡೆಯುತ್ತೇವೆ ಅಂತಾ ಸವಾಲು ಹಾಕಿದ್ರು. ಅವರು ಮಾಡಿರುವ ಎಲ್ಲ ಆರೋಪಗಳನ್ನ ಸಾಬೀತು ಮಾಡಬೇಕು. ಶಿಕ್ಷಣ ಸಂಸ್ಥೆಗೆ ತನ್ನದೆಯಾದ ಕಾನೂನಿನ ಚೌಕಟ್ಟು ಇದೆ. ಸಂಸ್ಥೆ ಅಂದ್ರೆ ಅವರು 10 ವರ್ಷ ಹೊಳೆಯಲ್ಲಿ ಉಸುಕು ಮಾರದಂಗ ಮಡ್ಯಾರ ಅಂತಾ ಕುಟುಕಿದ್ರು.

ಮಿನಿ ವಿಧೌನಸೌಧ ನಿರ್ಮಾಣಕ್ಕೆ ಅಡ್ಡಿ ಮಾಡ್ತಿದ್ದಾರೆ. ಮಾಜಿ ಶಾಸಕರ ಕುಮ್ಮಕ್ಕಿನಿಂದ ಅವರ ಪಕ್ಷದ ಕೆಲ ವಕೀಲರು ಇಲ್ಲ ಸಲ್ಲದ ಆರೋಪ ಮಾಡಿದಕ್ಕೆ ಅದು ಕೋರ್ಟ್ ನಲ್ಲಿದೆ ಅಂತಾ ಹೇಳಿದ್ರು. ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ತೀವ್ರ ವಿರೋಧ ಮಾಡಿದವರು ಭೂಸನೂರ ಅವರು. ಮೂರ್ತಿ ಸುಟ್ಟಿರುವ ಪ್ರಕರಣದ ಬಗ್ಗೆ ಮಾತ್ನಾಡಿದ ಅವರು, ಅದು ತನಿಖೆ ಹಂತದಲ್ಲಿದೆ. ಇದರ ಬಗ್ಗೆ ಬಹಳ ಕಾಳಜಿ ತಗೊಂಡಿರವ ಭೂಸನೂರ ಅವರು ನೇತೃತ್ವ ವಹಿಸಲಿ. ಅವರದೆ ಸರ್ಕಾರವಿದೆ. ನಾವು ಅವರು ಎಲ್ಲಿ ಕರೆಯುತ್ತಾರೋ ಅಲ್ಲಿಗೆ ಬರುತ್ತೇವೆ ಅಂತಾ ಹೇಳಿದ್ರು.

ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ ಕುರಿತು ಮಾತ್ನಾಡಿದ ಅವರು, ಹಗಲ ಹೊತ್ತು ರಕ್ಷಣಾ ವೇದಿಕೆ. ರಾತ್ರಿ ಬಿಜೆಪಿ ಅಂತಾ ವಗ್ದಾಳಿ ನಡೆಸಿದ್ರು. ಆಲಮೇಲ ತಾಲೂಕು ಆಗಿದೆ. ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಕಚೇರಿ ಪ್ರಾರಂಭ ಮಾಡಬೇಕೆಂದು ಹೋರಾಟ ಮಾಡ್ಯಾರ. ನೀವು ಬಿಜೆಪಿ ಅವರೆ ಇದೀರಿ. ಬಿಜೆಪಿ ಕಾರ್ಯಕರ್ತರನ್ನ ಕರೆದುಕೊಂಡು ಹೋರಾಟ ಮಾಡಬೇಕು. ಕರ್ನಾಟಕ ರಕ್ಷಣಾ ವೇದಿಕೆ ಕೆಲಸಗಳೆ ಬೇರೆಯಿವೆ ಅಂತಾ ಹೇಳಿದ್ರು. ಇನ್ನು ರೈತರ ಚೆಕ್ ಡ್ಯಾಂಗಳ ಯೋಜನೆಯಲ್ಲಿ, ಒಂದೇ ಮನೆಯಲ್ಲಿ 7 ಮಂದಿ ಬಾಂದಾರ ಹಾಕಿಕೊಂಡರ ಅಂತಾ ಹೇಳಿದ್ರು. ಒಬ್ಬೊಬ್ಬರಿಗೆ 10 ಲಕ್ಷ ರೂಪಾಯಿ ಬಾಂದಾರ ತಮ್ಮ ತಮ್ಮ ಮನೆಯಲ್ಲಿಯೇ ಹಾಕಿಕೊಂಡಾರ ಅಂತಾ ಹೇಳಿದ್ರು. ಗೋಲಗೇರಿಗೆ ನೀರು ಸರಬರಾಜು ಮಾಡಲು 2 ಬಾವಿಗಳು ಮಂಜೂರು ಆಗಿವೆ. 2 ಬಾವಿ ನೀರು ತಮ್ಮ ತೋಟಕ್ಕೆ ತೆಗೆದುಕೊಳ್ತಿದ್ದಾರೆ. ಕೂಡಲೇ ಅದನ್ನ ಬಂದ್ ಮಾಡಿ ಸಾರ್ವಜನಿಕರ ಬಳಕೆಗೆ ಕೊಡಬೇಕೆಂದು ಒತ್ತಾಯಿಸಿದ್ರು.

ಶಾಸಕ ಎಂ.ಸಿ ಮನಗೂಳಿ ಅವರಿಂದ ಕೆಲ ದಾಖಲೆಗಳ ಪ್ರದರ್ಶನ

ಸಿಂದಗಿ ಪುರಸಭೆ ಬಗ್ಗೆ ಮಾತ್ನಾಡಿದ ಅವರು, ಇಬ್ಬರು ನಾಗರೀಕರು ಕೋರ್ಟ್ ಗೆ ಹೋಗಿದ್ದಾರೆ. ವಾರ್ಡ್ ವಿಂಗಡಣೆ ಸರಿಯಾಗಿ ಆಗಿಲ್ಲೆಂದು. ನಮ್ಮದೊಂದು ಪುರಸಭೆ ಅಲ್ಲ, 30 ರಿಂದ 40 ಪುರಸಭೆಗಳ ಚುನಾವಣೆ ನೆನಗುದಿಗೆ ಬಿದ್ದಿವೆ ಅಂತಾ ಹೇಳಿದ್ರು.

ಇದೇ ವೇಳೆ ಕೆಲವು ದಾಖಲೆಗಳನ್ನ ಪ್ರದರ್ಶನ ಮಾಡಲಾಯ್ತು. ತಾಲೂಕು ಅಧ್ಯಕ್ಷ ನಿಂಗಣ್ಣ ಪೂಜಾರಿ, ಎಸ್ಸಿ ಘಟಕದ ಅಧ್ಯಕ್ಷ ಪರಶುರಾಮ ಕಾಂಬಳೆ, ಗುರಣ್ಣಗೌಡ ಪಾಟೀಲ, ಶೈಲಜಾ ಸ್ಥಾವರಮಠ, ಮಂಜುನಾಥ ಬಿರಾದಾರ, ರವಿ ದೇವರಮನಿ, ಬಸವರಾಜ ಮಾರಲಭಾವಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!