ಯತ್ನಾಳ ಹುಲಿ ಅಲ್ಲ.. ಬೊಗಳುವ ಪ್ರಾಣಿ: ಎಂ.ಸಿ ಮುಲ್ಲಾ

314

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನ ಖಂಡಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಬಂದ್ ಗೆ ಕರೆ ಕೊಟ್ಟಿವೆ. ಅಲ್ದೇ, ಪ್ರತಿಯೊಂದು ಜಿಲ್ಲೆಗಳಲ್ಲಿ ಈಗಾಗ್ಲೇ ಹೋರಾಟ ಮಾಡಿಕೊಂಡು ಬರಲಾಗ್ತಿದೆ. ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸ್ತಿರುವ ಶಾಸಕ ಯತ್ನಾಳ, ಕರವೇ ಅನ್ನು ಕಳ್ಳರ ವೇದಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕರವೇ ಜಿಲ್ಲಾಧ್ಯಕ್ಷ ಎಂ.ಸಿ ಮುಲ್ಲಾ, ಬೊಗಳುವ ಪ್ರಾಣಿ ಹುಲಿ ಆಗಲ್ಲ. ಹುಲಿ ಹುಲಿ ಎಂದು ತಾವೇ ಬಿಲ್ಡಪ್ ತೆಗೆದುಕೊಳ್ಳುವ ಪ್ರಾಣಿಯನ್ನು ಕಾಡಿನಲ್ಲಿ ಬಿಟ್ಟು ಬರಬೇಕಾಗುತ್ತದೆ. ಎಂಇಎಸ್ ಏಜೆಂಟರಂತೆ ವರ್ತಿಸ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ಪಾಳರಿಗೆ ಕರವೇ ಕಂಡರೆ ಭಯ. ಹೀಗಾಘಿ ಬಂದ್ ವಿಫಲಗೊಳಿಸುವ ಶತಪ್ರಯತ್ನ ನಡೆಸಿದ್ದಾರೆ. ವ್ಯಾಪಾರಿಗಳ ಜೊತೆ ಸಭೆ ನಡೆಸಿ ಬಂದ್ ವಿಫಲಗೊಳಿಸಲು ನೋಡ್ತಿದ್ದಾರೆ. ಕರವೇ ಕಳ್ಳರ ವೇದಿಕೆ ಎಂದು ಆಪಾದಿಸುವ ಮುನ್ನ ಶಾಸಕ ಯತ್ನಾಳ ಎಷ್ಟು ಸಾಚಾ ಎಂಬುದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಬೇಕು ಎಂದಿದ್ದಾರೆ.

ವ್ಯಾಪಾರಸ್ಥರು ಬಂದ್ ಗೆ ಸ್ಪಂದಿಸ್ತಿದ್ದಾರೆ. ಆದ್ರೇ, ಶಾಸಕರು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರನ್ನು ಬಳಸಿಕೊಂಡು ಜನರಲ್ಲಿ ಭಯ ಮೂಡಿಸುವುದನ್ನು ನಿಲ್ಲಿಸಬೇಕೆಂದರು ಎಂದರು.




Leave a Reply

Your email address will not be published. Required fields are marked *

error: Content is protected !!