ಸರಿಯಾಗಿ ರಾಷ್ಟ್ರ ಗೀತೆ ಹಾಡಿ ಎಂದವನಿಗೆ ಕಿಚ್ಚನ ಉತ್ತರವೇನು?

292

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಆಗಸ್ಟ್ 15, ಭಾನುವಾರ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಕಿಚ್ಚ ಸುದೀಪ್ ಅವರು ಟ್ವೀಟರ್ ನಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಶುಭ ಕೋರಿದ್ರು. ಇದಕ್ಕೆ ಓರ್ವ ಕಾಮೆಂಟ್ ಮಾಡಿದ್ದು, ಅದಕ್ಕೆ ಸುದೀಪ್ ಉತ್ತರಿಸಿದ್ದಾರೆ.

ಕರೆಕ್ಟ್ ಆಗಿ ನ್ಯಾಷನ್ ಆ್ಯಂಥಮ್ ಹಾಡಿ. ನಿಮ್ಮನ್ನ ತುಂಬಾ ಜನ ಫಾಲೋ ಮಾಡ್ತಾರೆ. ನೀವು ಟಾಪ್ ಆ್ಯಕ್ಟರ್ ಆಗಿರಬಹುದು. ಆದ್ರೆ, 48-52 ಸೆಕೆಂಡ್ ವೊಳಗೆ ಹಾಡಬೇಕು ಅನ್ನೋ ಕಾಮನ್ ಸೆನ್ಸ್ ಕೂಡಾ ಇಲ್ವಾ ಎಂದು ಕಾಮೆಂಟ್ ಮಾಡಿದ್ದ. ಇದಕ್ಕೆ ಉತ್ತರಿಸಿದ ಸುದೀಪ್, ಕಠಿಣ ಮಾತು. ಆದರೂ ಸ್ವೀಕರಿಸುತ್ತೇನೆ. ನನ್ನ ದೇಶಕ್ಕಾಗಿ ನನಗೆ ಅನಿಸಿದ್ದನ್ನು ಪ್ರೀತಿಯಿಂದ ಮಾಡಿದ್ದೇನೆ. ಜೈ ಹಿಂದೆ ಎಂದಿದ್ದಾರೆ.

ಸುದೀಪ್ ಉತ್ತರಿಸಿದ್ದಕ್ಕೆ ಅಭಿಮಾನಿಗಳು ಬೆಂಬಲಿಸಿದ್ದು, ನೀವ್ಯಾಕೆ ಇಂತವರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ ಸರ್. ಅ ಕಾರಕ್ಕೆ ಹ ಕಾರಕ್ಕೆ ವ್ಯತ್ಯಾಸ ಗೊತ್ತಿಲ್ಲ. ಅಂತವರಿಗೆ ಉತ್ತರಿಸಬೇಡಿ ಎಂದಿದ್ದಾರೆ. ದರ್ಶನ್ ಅಭಿಮಾನಿಗಳು ಸಹ ಸುದೀಪ್ ಪರ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!