ಇದು ಧಾರ್ಮಿಕ ಕಾಳಜಿಯಲ್ಲ, ಯೋಜಿತ ಪಿತೂರಿ: ನುಸ್ರುತ್ ಜಹಾನ್

165

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರದಲ್ಲಿನ ಹಾಡೊಂದರಲ್ಲಿ ನಟಿ ತೊಟ್ಟಿರುವ ಬಿಕಿನಿ ಬಣ್ಣದ ವಿಚಾರಕ್ಕೆ ವಿವಾದ ಸೃಷ್ಟಿಸಲಾಗಿದೆ. ಈ ಬಗ್ಗೆ ಹಿರಿಯ ನಟ ಅಮಿತಾಬ್ ಬಚ್ಚನ್ ಕೊಲ್ಕತ್ತಾ ಚಲನಚಿತ್ರೋತ್ಸವದಲ್ಲಿ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿ ಛಾಟಿ ಬೀಸಿದ್ದರು.

ಈಗ ಬಂಗಾಳದ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರುತ್ ಜಹಾನ್ ಸಹ ವಾಗ್ದಾಳಿ ನಡೆಸಿದ್ದಾರೆ. ಇವರು ಮಾಡುತ್ತಿರುವುದು ಧಾರ್ಮಿಕ ಕಾಳಜಿಯಿಂದಲ್ಲ. ಬದಲಾಗಿ ಇದೊಂದು ಯೋಜಿತ ಪಿತೂರಿ. ಇವರಿಗೆ ಮಹಿಳೆ ಹಿಜಾಬ್ ತೊಟ್ಟರೂ ಸಮಸ್ಯೆ, ಬಿಕಿನಿ ತೊಟ್ಟರೂ ಸಮಸ್ಯೆ ಎಂದು ಕಿಡಿ ಕಾರಿದ್ದಾರೆ.

ಆಧುನಿಕ ಭಾರತದಲ್ಲಿ ಮಹಿಳೆ ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ನಡೆಯಬೇಕು, ಮಾತನಾಡಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎನ್ನುವ ಮೂಲಕ ಅವಳನ್ನು ನಿಯಂತ್ರಿಸುವ ಕೆಲಸ ಮಾಡಲಾಗುತ್ತಿದೆ. ಇವರು ಯಾವುದನ್ನು ಹೊಸ ಅಭಿವೃದ್ಧಿ ಎನ್ನುತ್ತಿದ್ದಾರೋ ಅದು ಬಹಳ ಭಯಾನಕವಾಗಿದೆ. ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ಯೋಚಿಸಿದರೆ ಭಯವಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!