ಬಿಡುಗಡೆಗೂ ಮೊದ್ಲೇ ಪಠಾಣ್ ಆನ್ಲೈನ್ ನಲ್ಲಿ ಲೀಕ್

327

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಾಕಷ್ಟು ವಿವಾದಗಳ ಮೂಲಕ ಸುದ್ದಿ ಮಾಡಿದ್ದ ನಟ ಶಾರೂಕ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಿಂ ನಟನೆಯ ಪಠಾಣ್ ಚಿತ್ರ 100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್ ಆಗುವ ಮೂಲಕ ಇಂದು ವರ್ಲ್ಡ್ ವೈಡ್ ಪ್ರದರ್ಶನ ಕಂಡಿದೆ. ಆದರೆ, ಸಿನಿಮಾ ಬಿಡುಗಡೆಗೂ ಮೊದ್ಲೇ ಆನ್ಲೈನ್ ನಲ್ಲಿ ಲೀಕ್ ಆಗಿದೆ.

ಮಾಧ್ಯಮವೊಂದರ ವರದಿಯ ಪ್ರಕಾರ Filmyzilla ಮತ್ತು Filmy4wap ಅನ್ನೋ ಎರಡು ಆಪ್ ಗಳಲ್ಲಿ ಮೂವಿ ಲೀಕ್ ಆಗಿದೆಯಂತೆ. ಹೀಗಾಗಿ ನಿರ್ಮಾಪಕರಿಗೆ ಕೋಟಿಗಟ್ಟಲೇ ನಷ್ಟವಾಗುತ್ತಿದೆ. ಮೊದಲ ದಿನವೇ 5 ಲಕ್ಷಕ್ಕೂ ಹೆಚ್ಚು ಟಿಕೆಟ್ ಗಳು ಮುಂಗಡ ಬುಕ್ ಆಗಿದ್ದವು. ಈಗ ವೆಬ್ ಸೈಟ್ ನಲ್ಲಿ ಲೀಕ್ ಆಗಿರುವುದರಿಂದ ನೋಡುಗರ ಸಂಖ್ಯೆ ಕಡಿಮೆಯಾಗಲಿದೆ.

ಚಿತ್ರದ ನಿರ್ಮಾಪಕರಾದ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಸಿನಿ ರಸಿಕರು, ಶಾರೂಕ್ ಅಭಿಮಾನಿಗಳು ಚಿತ್ರವನ್ನು ಥಿಯೇಟರ್ ನಲ್ಲಿಯೇ ನೋಡಿ ಎಂಜಾಯ್ ಮಾಡಿ ಎಂದಿದ್ದಾರೆ. ಇನ್ನು ಬಿಗ್ ಸ್ಕ್ರೀನ್ ಮೇಲಿನ ಚಿತ್ರದ ಸೀನ್ ಗಳು ಲೀಕ್ ಆಗದಂತೆ ಎಚ್ಚರಿಕೆ ನೀಡಲಾಗಿದೆ.
Leave a Reply

Your email address will not be published. Required fields are marked *

error: Content is protected !!