ಪಿಎಂ ಕೇರ್ಸ್ ಶುರುವಾದ 4 ದಿನಗಳಲ್ಲಿ ಬಂದ ದೇಣಿಗೆಯಷ್ಟು?

318

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಶುರು ಮಾಡಿತು. ಮಾರ್ಚ್ 24ರಿಂದ 21 ದಿನಗಳ ಕಾಲ ದೇಶದಲ್ಲಿ ಮೊದಲ ಹಂತದ ಲಾಕ್ ಡೌನ್ ಘೋಷಣೆಯಾಯ್ತು. ಮಾರ್ಚ್ 28ರಂದು ಪಿಎಂ ಕೇರ್ಸ್ ಫಂಡ್ ಶುರುವಾಯ್ತು.

ಹೀಗೆ ಶುರುವಾದ ಪಿಎಂ ಕೇರ್ಸ್ ಫಂಡ್ ಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಯ ವರದಿ ಪ್ರಕಾರ ಮಾರ್ಚ್ 31ರ ವರೆಗಿನ ಲೆಕ್ಕ 30,70,62,58,096 ಆಗಿದೆ. ಪಿಎಂ ಕೇರ್ಸ್ ಫಂಡ್ ಶುರುವಾದ 4 ದಿನಗಳಲ್ಲಿ 30,76 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ.

ಉದ್ಯಮಿಗಳು, ಸಿನಿಮಾ ಸ್ಟಾರ್ಸ್, ರಾಜಕಾರಣಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ನೌಕರರು ಸೇರಿದಂತೆ ಅನೇಕರು ದೇಣಿಗೆ ಸಲ್ಲಿಸಿದ್ದಾರೆ. ಇದಕ್ಕೆ ಪಾರದರ್ಶಕತೆ ಇರಬೇಕೆಂದು ಪ್ರತಿಪಕ್ಷಗಳು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ವು. ಇದೀಗ ಪಿಎಂ ಕೇರ್ಸ್ ವೆಬ್ ಸೈಟ್ ನಲ್ಲಿ ಮಾರ್ಚ್ 31ರ ತನಕ ಸಂಗ್ರಹಗೊಂಡ ಹಣದ ಲೆಕ್ಕ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಂದ ದೇಣಿಗೆ ಬಗ್ಗೆ ತಿಳಿದಿಲ್ಲ.




Leave a Reply

Your email address will not be published. Required fields are marked *

error: Content is protected !!