ಪ್ರಜಾಸ್ತ್ರ ಸುದ್ದಿ
ಒಡಿಶಾ: ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ, ಇಂದು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ ಒಬಿಸಿ ವರ್ಗದಲ್ಲಿ ಜನಿಸಿಲ್ಲ. ಒಬಿಸಿ ಎಂದು ಜನರನ್ನು ನಂಬಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಗುಜರಾತಿನಲ್ಲಿ ತೇಲಿ ಸಮುದಾಯದಲ್ಲಿ ಜನಿಸಿದರು. 2000ರಲ್ಲಿ ಬಿಜೆಪಿಯಿಂದ ತೇಲಿ ಸಮುದಾಯಕ್ಕೆ ಒಬಿಸಿ ಟ್ಯಾಗ್ ಲೈನ್ ಸಿಕ್ಕಿತು. ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ. ಹೀಗಾಗಿ ಎಂದಿಗೂ ಜಾತಿ ಗಣತಿ ಮಾಡಲು ಬಿಡುವುದಿಲ್ಲ. ಬಿಲಿಯನೇರ್ ಗಳ ತಬ್ಬಿಕೊಳ್ಳುವ ಮೋದಿ ಒಬಿಸಿಗಳ ಕೈ ಕುಲುಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.