ಪಿಎಸ್ಐ ನೇಮಕಾತಿ ಹಗರಣ: ಪೌಲ್ ಗೆ ಜಾಮೀನು

237

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ 35ನೇ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಕಳೆದೊಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದರು, ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಪೌ್ಲ ಪರ ವಕೀಲರಾದ ಎಂ.ಎಸ್ ಶ್ಯಾಮಸುಂದರ್, ತನಿಖಾಧಿಕಾರಿಗಳು ಹಂತ ಹಂತವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ. ಇದು ಅಪರಾಧ ದಂಡ ಸಂಹಿತೆ 1973ರ ಕಲಂ 173ಕ್ಕೆ ವಿರುದ್ಧವಾಗಿದೆ. ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೋರ್ಟ್ ಅವರ ವಿರುದ್ಧದ ಅಪರಾಧಗಳನ್ನು ಸಂಜ್ಞೆಯ ಎಂದು ಪರಿಗಣಿಸದೆ ಇರುವ ಕಾರಣ ಬಂಧನ ಕಾನೂನು ಬಾಹಿರ ಎಂದು ವಾದ ಮಂಡಿಸಿದರು.

ಸರ್ಕಾರದ ಪರ ವಕೀಲರಾದ ಪ್ರಸನ್ನಕುಮಾರ್ ವಾದ ಮಂಡಿಸಿ, ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಿದ್ದಲು ಕಾರಣರಾಗಿದ್ದರು. ಹಗರಣದ ಸಂದರ್ಭದಲ್ಲಿ ಅವರು ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು. ಸುಳ್ಳು ದಾಖಲೆ ನೀಡಿ ವೈದ್ಯಕೀಯ ರಜೆ ಹಾಕಿ ಹಗರಣ ನಡೆಯಲು ಕಾರಣರಾಗಿದ್ದರು ಎಂದು ಹೇಳಿದರು.
Leave a Reply

Your email address will not be published. Required fields are marked *

error: Content is protected !!