Search

ಬ್ರೇಕ್ ಬೀಳುತ್ತಾ ಸಿಂದಗಿಯ ರೋಡ್ ರೋಮಿಯೋಗಳ ಕಾಟಕ್ಕೆ?

648

ಸಿಂದಗಿ: ಪಟ್ಟಣದಲ್ಲಿ ರೋಡ್ ರೋಮಿಗಳ ಕಾಟ ಹೆಚ್ಚಾಗಿದೆ. ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಸಾಕಷ್ಟು ತೊಂದರೆಯಾಗ್ತಿರುವ ಪ್ರಕರಣಗಳು ಹೆಚ್ಚಿದ್ದು ಇದ್ರಿಂದ ಹೆಣ್ಮಕ್ಕಳು ಮನೆಯಿಂದ ಆಚೆ ಬರುವುದಕ್ಕೆ ಭಯ ಪಡ್ತಿದ್ದಾರೆ.

ಪಟ್ಟಣದ ಪ್ರಮುಖ ಶಾಲಾ, ಕಾಲೇಜು, ಬೀದಿಗಳಲ್ಲಿ ಬೀದಿ ಕಾಮಣ್ಣರು ಕಾಟ ಕೊಡ್ತಿದ್ದಾರೆ. ಬೈಕ್ ಮೇಲೆ ಹೋಗುವಾಗ ಕಾಡಿಸುವುದು, ಬಾಯಿಗೆ ಬಂದಂತೆ ಮಾತ್ನಾಡುವುದು, ಹಲವು ರೀತಿಯ ಸನ್ನೆಗಳನ್ನ ಮಾಡುವುದು ಕಾಮನ್ ಆಗಿದೆ. ಈ ಬಗ್ಗೆ ಕಾಲೇಜು ಶಿಕ್ಷಕರ ಬಳಿ ಹಲವು ವಿದ್ಯಾರ್ಥಿನಿಯರು ತಮ್ಮ ಗೋಳು ತೋಡಿಕೊಂಡಿದ್ದಾರೆ.

ಶಾಲಾ, ಕಾಲೇಜಿನ ವಿದ್ಯಾರ್ಥಿನಿಯರು ನಿರ್ಭೀತಿಯಿಂದ ತಿರುಗಾಡಲು ಆಗ್ತಿಲ್ಲ. ಪುಂಡ ಹುಡುಗರ ಕಾಟ ಹೆಚ್ಚಾಗಿದ್ದು, ಹಲವು ವಿದ್ಯಾರ್ಥಿನಿಯರು ನಮ್ಮ ಗಮನಕ್ಕೆ ತಂದಿದ್ದಾರೆ. ಬಸ್ ನಿಲ್ದಾಣದ ಬಳಿಯೂ ಇದರ ಕಾಟ ಹೆಚ್ಚಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು, ಊರಿನ ಗಣ್ಯ ವ್ಯಕ್ತಿಗಳು ಗಮನ ಹರಿಸಬೇಕು. ಈ ಮೂಲಕ ಹೆಣ್ಮಕ್ಕಳು ನೆಮ್ಮದಿಯಿಂದ ಓಡಾಡುವಂತೆ ಮಾಡಬೇಕು.

ಜಗದೀಶ ಚಂದ್ರಶೇಖರ ಪಾಟೀಲ, ಪ್ರಾಚಾರ್ಯರು, ಜ್ಞಾನ ಭಾರತಿ ಕಾಲೇಜು

ಸರ್ ಹುಡುಗರ ಕಾಟ ಭಾಳ ಆಗೈತ್ರಿ. ಕಾಲೇಜಿಗೆ ಹೋಗುವಾಗ ಬರುವಾಗ ಬೈಕ್ ಮೇಲೆ ಹಿಂದೆ ಬಂದಂತೆ ಮಾಡಿ ಬಾಯಿಗೆ ಬಂದಂತೆ ಅಂದು ಹೋಗ್ತಾರ್ರಿ. ಕೆಲವರು ಸನ್ನೆ ಮಾಡಿ ಹಿಂಸೆ ಕೊಡ್ತಿದ್ದಾರೆ. ಪೊಲೀಸ್ರು ಈ ಬಗ್ಗೆ ಗಮನ ಹರಿಸಬೇಕು.

ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿ

ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುವುದು, ಹೆಣ್ಮಕ್ಕಳ ಪಕ್ಕದಲ್ಲಿಯೇ ಬಂದು ಟರ್ನ್ ಹೊಡೆಯುವುದು ನಡೆಸಿದ್ದಾರೆ. ಶಾಲಾ, ಕಾಲೇಜು ಶುರುವಾಗುವ ಟೈಂ ಹಾಗೂ ಬಿಡುವ ಟೈಂ ವೇಳೆಯಲ್ಲಿ ಗುಂಪು ಗುಂಪಾಗಿ ಬೈಕ್ ಮೇಲೆ ಬರುವ ಕೆಲ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸ್ತಿದ್ದಾರೆ. ಈ ಬಗ್ಗೆ ಪೊಲೀಸರು ನಿಗಾ ವಹಿಸುವ ಮೂಲಕ ಪುಂಡ ಪೋಕರಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸ್ತಿದ್ದಾರೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!