ವಿಕೃತ ಕಾಮಿ, ಸರಣಿ ಹತ್ಯಾಚಾರಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ

245

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಕೃತ ಕಾಮಿ, ಸರಣಿ ಅತ್ಯಾಚಾರ ಹಾಗೂ ಹಂತಕ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ಈ ಹಿಂದೆ ಗಲ್ಲು ಶಿಕ್ಷೆ ನೀಡಿದ್ದ ಮಧ್ಯಂತರ ತಡಾಜ್ಞೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಉಮೇಶಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.

18 ವರ್ಷ ಶಿಕ್ಷೆಯಲ್ಲಿ 10 ವರ್ಷಗಳ ಕಾಲ ಏಕಾಂತ ಶಿಕ್ಷೆ ಅನುಭವಿಸಿದ್ದೇನೆ. ಇದರಿಂದಾಗಿ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನಗೆ ಕ್ಷಮಾಧಾನ ನೀಡಬೇಕೆಂದು ಗೃಹ ಇಲಾಖೆ, ರಾಜ್ಯಪಾಲ, ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದ. ಕ್ಷಮಾದಾನ ಸಿಕ್ಕಿರಲಿಲ್ಲ. ಹೀಗಾಗಿ ಜೀವನಪರ್ಯಂತ ಜೈಲುವಾಸಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಲಾಗಿತ್ತು.

ಈಗ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಬಗ್ಗೆ ಮಾತನಾಡಿರುವ ಉಮೇಶ್ ರೆಡ್ಡಿ ಪರ ವಕೀಲ ಜಗದೀಶ್, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು 6 ವಾರಗಳ ಕಾಲವಕಾಶ ಸಿಕ್ಕಿದೆ. ಕಕ್ಷಿದಾರ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ. ಮಾಜಿ ಕಾನ್ಸ್ ಟೇಬಲ್ ಉಮೇಶ್ ರೆಡ್ಡಿ ಅತ್ಯಾಚಾರ, ಕೊಲೆ, ದರೋಡೆ ಸೇರಿದಂತೆ 23 ಪ್ರಕರಣಗಳು ಸಾಬೀತಾಗಿವೆ. 8 ವರ್ಷಗಳ ವಿಚಾರಣೆ ಬಳಿಕ ಅಕ್ಟೋಬರ್ 2, 2006ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ಸೆಷನ್ಸ್ ಕೋರ್ಟ್ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಇದೆಲ್ಲದರ ನಡುವೆ ಒಂದಲ್ಲ ಒಂದು ಅರ್ಜಿ ಸಲ್ಲಿಸುತ್ತಾ ಬಂದಿದ್ದರಿಂದ ಇದುವರೆಗೂ ಸೆರೆಮನೆ ವಾಸ ಅನುಭವಿಸುತ್ತಾ ಬಂದಿದ್ದು, ಇದೀಗ ಗಲ್ಲು ಶಿಕ್ಷೆ ಖಾಯಂ ಆಗಿದೆ.




Leave a Reply

Your email address will not be published. Required fields are marked *

error: Content is protected !!