ಸಿಎಂ ತವರು ಜಿಲ್ಲೆಯಲ್ಲೇ ದಲಿತ ಕುಟುಂಬಗಳ ಮನೆಗೆ ಬೆಂಕಿ

140

ಪ್ರಜಾಸ್ತ್ರ ಸುದ್ದಿ

ರಾಣೇಬೆನ್ನೂರು: ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ 2 ದಲಿತ ಕುಟುಂಬಗಳ ಮನೆಗೆ ಭಾನುವಾರ ತಡರಾತ್ರಿ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ 25 ಜನರ ವಿರುದ್ಧ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳು ಶರಣಾಗಿದ್ದಾರೆ.

ಪೆಟ್ರೋಲ್, ಕಟ್ಟಿಗೆ ಸುರಿದು ಮನೆಗೆ ಬೆಂಕಿ ಹಚ್ಚಲಾಗಿದೆಯಂತೆ. ಈ ವೇಳೆ ಪ್ರಾಣರಕ್ಷಣೆಗಾಗಿ ಮನೆಯ ಸದಸ್ಯರು ಗ್ರಾಮದಿಂದ ಓಡಿ ಹೋಗಿದ್ದಾರೆ. ಎಸ್ಸಿ, ಎಸ್ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.

ಭಾನುವಾರ ದ್ಯಾಮವ್ವ ಜಾತ್ರೆ ನಡೆದಿದೆ. ದಾಲಿತ ಕಾಲೋನಿ ಮೂಲಕ ಮೆರವಣಿಗೆ ಸಾಗುತ್ತಿದ್ದಾಗ ಮಕ್ಕಳು, ಯುವಕರು ಮೆರವಣಿಗೆಯಲ್ಲಿ ಕುಣಿಯಲು ಮುಂದಾದಾಗ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ. ಜಾತ್ರೆಗೆ ದಲಿತ ಕುಟುಂಬಗಳು ಸೇರಬಾರದು ಎಂದು ಹೇಳಿದಾಗ ಎರಡು ಕಡೆ ಜಗಳ ಶುರುವಾಗಿದೆ. ನಂತರ ರಾತ್ರಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದ್ದು, ನಿಜಕ್ಕೂ ನಾಚಿಕಗೇಡಿನ ಸಂಗತಿಯಾಗಿದೆ.




Leave a Reply

Your email address will not be published. Required fields are marked *

error: Content is protected !!